ಮುಂಬೈ, ಜ.19 (DaijiworldNews/HR): ಬಾಲಿವುಡ್ ನಟ ವರುಣ್ ಧವನ್ ತಮ್ಮ ಬಹುಕಾಲದ ಗೆಳತಿ, ವಸ್ತ್ರ ವಿನ್ಯಾಸಕಿ ನತಾಶಾ ದಲಾಲ್ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಜನವರಿ 24ರಂದು ಹಿಂದೂ ಸಂಪ್ರದಾಯದಂತೆ ಅಲಿಬಾಗ್ನಲ್ಲಿ ಮದುವೆ ನಡೆಯಲಿದ್ದು, ಮದುವೆ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಸ್ನೇಹಿತರಷ್ಟೇ ಭಾಗವಹಿಸಲಿದ್ದಾರೆ' ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.
ಇನ್ನು ವರುಣ್ ಹಾಗೂ ನತಾಶಾ ಒಟ್ಟಿಗೆ ಓದಿದ್ದು, ಬಹಳ ದಿನಗಳಿಂದ ಪ್ರೀತಿಸುತ್ತಿದ್ದಾರೆ.
ವರುಣ್ ಧವನ್ ವಿವಾಹ 2020ರ ಮೇನಲ್ಲಿ ನಡೆಯಬೇಕಿತ್ತು, ಆದರೆ ಕೊರೊನಾದಿಂದಾಗಿ ಮದುವೆಯನ್ನು ಮುಂದಕ್ಕೆ ಹಾಕಲಾಗಿತ್ತು ಎನ್ನಲಾಗಿದೆ.