ಹೈದರಾಬಾದ್, ಜ.16 (DaijiworldNews/HR): ತಮಿಳುನಟ ವಿಜಯ್ ಸೇತುಪತಿ ಖಡ್ಗದಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿ ವಿವಾದಕ್ಕೊಳಗಾಗಿದ್ದು, ಇದೀಗ ಬೇಷರತ್ ಆಗಿ ಕ್ಷಮೆಯಾಚಿಸಿದ್ದಾರೆ.
ಸೇತುಪತಿ ಅವರು ಖಡ್ಗದಿಂದ ಕೇಕ್ ಕತ್ತರಿಸಿದ ದೃಶ್ಯಗಳು ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಜೊತೆಗೆ ಪೊಲೀಸರೂ ಕೂಡ ಕ್ರಮ ಕೈಗೊಳ್ಳಲು ಮುಂದಾಗಿದ್ದರು.
ಇನ್ನು "ನಾನು ಉದ್ದೇಶಪೂರ್ವಕವಾಗಿ ಖಡ್ಗದಿಂದ ಕೇಕ್ ಕತ್ತರಿಸಲಿಲ್ಲ, ಅದು ಚಿತ್ರದ ಭಾಗವಾಗಿತ್ತು. ಮುಂದೆ ಇಂಥ ಘಟನೆಗಳಾಗದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ಕಾಲಿವುಡ್ನಲ್ಲಿ ಖಳಪಾತ್ರಗಳ ಮೂಲಕ ಮಿಂಚಿರುವ ಸೇತುಪತಿ, ಇತ್ತೀಚೆಗೆ ಬಿಡುಗಡೆ ಆದ ವಿಜಯ್ ಅವರ ‘ಮಾಸ್ಟರ್’ ಚಿತ್ರದಲ್ಲಿ ಕ್ರೂರಿ ಖಳನಾಯಕ ‘ಭವಾನಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.