ಕೊಚ್ಚಿ, ಡಿ. 29(DaijiworldNews/HR): ಮಲಯಾಳಂ ಸಿನಿಮಾ 'ವರ್ತಮಾನಂ' ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಆಧಾರಿತ ಕಥೆಯಾಗಿದ್ದು, ಈ ಚಿತ್ರಕ್ಕೆ ಪ್ರಮಾಣ ಪತ್ರವನ್ನು ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಪ್ರಾದೇಶಿಕ ಕಚೇರಿ ನಿರಾಕರಿಸಿದೆ.
ಈ ಸಿನಿಮಾವನ್ನು ಸಿದ್ಧಾರ್ಥ್ ಶಿವ ನಿರ್ದೇಶಿಸಿದ್ದು, ಪಾರ್ವತಿ ತಿರುವೊತು ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ವರ್ತಮಾನಂ' ಸಿನಿಮಾವನ್ನು ಈ ವಾರವೇ ಮುಂಬೈನ ಪ್ರಮಾಣೀಕರಣ ಮಂಡಳಿಯ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುವುದು ಎಂಬುದಾಗಿ ಸಿನಿಮಾ ನಿರ್ಮಾಪಕ, ಕಥೆಗಾರ ಆರ್ಯದನ್ ಶೌಕತ್ ತಿಳಿಸಿದ್ದಾರೆ,
ಇನ್ನು ಈ ಸಿನಿಮಾದ ಪ್ರಮಾಣ ಪತ್ರವನ್ನು ನೀಡಲು ಸಿಬಿಎಫ್ಸಿ ತಿರಸ್ಕರಿಸಿರುವುದಕ್ಕೆ ಕಾರಣ ಏನೆಂಬುದನ್ನು ತಿಳಿಸಿಲ್ಲ.