ಬೆಂಗಳೂರು, ಡಿ. 27 (DaijiworldNews/HR): ಬಾಲಿವುಡ್ನ ಖ್ಯಾತ ನಟ ಅಮಿತಾಬ್ ಬಚ್ಚನ್ ಜೊತೆ ನಟಿ ರಶ್ಮಿಕಾ ಮಂದಣ್ಣ ವಿಕಾಸ್ ಬಾಲ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ.
ಈ ಸಿನಿಮಾವನ್ನು ರಿಯಲನ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, 2021ರ ಮಾರ್ಚ್ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.
2016ರಲ್ಲಿ ಸ್ಯಾಂಡಲ್ವುಡ್ ಹಿಟ್ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ತೆರೆಗೆ ಬಂದ ರಶ್ಮಿಕಾ ಮಂದಣ್ಣ ತಮ್ಮ ಸಿನಿಪಯಣವನ್ನು ಆರಂಭಿಸಿ ಬಳಿಕ ಕನ್ನಡದ 'ಯಜಮಾನ', ತೆಲುಗಿನ 'ಗೀತಾ ಗೋವಿಂದಂ', 'ದೇವದಾಸ್', 'ಸರಿಲೇರು ನೀಕ್ವೆವರು', 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ನಟಿಸಿದ್ದಾರೆ.
ವಿಕಾಸ್ ಬಾಲ್ ನಿರ್ದೇಶನದ ಈ ಸಿನಿಮಾ ಹಾಸ್ಯದ ಅಂಶವನ್ನು ಒಳಗೊಂಡಿದ್ದು, ಅಮಿತಾಬ್, ರಶ್ಮಿಕಾ ಮಂದಣ್ಣ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ.
ಇನ್ನು ತಾತ್ಕಾಲಿಕವಾಗಿ ಈ ಸಿನಿಮಾಗೆ ಡೆಡ್ಲಿ ಎಂದು ಹೆಸರಿಸಲಾಗಿದ್ದು ಇದು ತಂದೆ–ಮಗಳ ಕಥೆಯನ್ನು ಒಳಗೊಂಡಿದೆ ಎನ್ನಲಾಗಿದೆ.