ಮುಂಬೈ, ಡಿ.25 (DaijiworldNews/HR): ಬಾಲಿವುಡ್ ಸ್ಟಾರ್ಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಪ್ರೀತಿಸುತ್ತಿದ್ದಾರೆಂದು ಸಿನಿರಂಗ ಹಾಗೂ ಅಭಿಮಾನಿಗಳು ಮಾತನಾಡುತ್ತಿದ್ದರು, ಆದರೆ ಅವರಿಬ್ಬರೂ ತಾವು ಪ್ರೇಮಿಗಳು ಎಂದು ಸಾರ್ವಜನಿಕವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ.ಇದೀಗ ಸ್ವತಃ ರಣಬೀರ್ ಕಪೂರ್ ಆವರೇ ಆಲಿಯಾ ಭಟ್ ತಮ್ಮ ಗರ್ಲ್ ಫ್ರೆಂಡ್ ಎಂದು ಖಚಿತಪಡಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಆಲಿಯಾ ಭಟ್ ಬಗ್ಗೆ ಮಾತನಾಡಿದ್ದು, ಲಾಕ್ ಡೌನ್ ಸಮಯದಲ್ಲಿ ಮುಂಬೈಯಲ್ಲಿ ನಾವಿಬ್ಬರೂ ಜೊತೆಯಾಗಿ ವಾಸವಾಗಿದ್ದು, ಸಾಕಷ್ಟು ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡಿದ್ದು ಸದ್ಯದಲ್ಲಿಯೇ ಮದುವೆಯಾಗುವುದಾಗಿಯೂ ತಿಳಿಸಿದ್ದಾರೆ.
ಇನ್ನು ಆಲಿಯಾ ಗಿಟಾರ್ನಿಂದ ಹಿಡಿದು ಚಿತ್ರಕಥೆ ಬರೆಯುವವರೆಗೆ ತರಬೇತಿ ಪಡೆದುಕೊಂಡಿದ್ದು ಸಾಕಷ್ಟು ಸಾಧನೆ ಮಾಡಿದ್ದಾಳೆ, ಅವಳಷ್ಟು ನಾನು ಸಾಧನೆ ಮಾಡಿಲ್ಲ, ಕಲಿತಿಲ್ಲ ಎಂದು ನನಗೆ ಯಾವಾಗಲೂ ಅನಿಸುತ್ತದೆ ಎಂದರು
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಆಯನ್ ಮುಖರ್ಜಿಯವರ ಮುಂದಿನ ಚಿತ್ರ ಬ್ರಹ್ಮಾಸ್ತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.