ಬೆಂಗಳೂರು, ಡಿ.15 (DaijiworldNews/HR): ಗಿರಿರಾಜ ನಿರ್ದೇಶಿಸುತ್ತಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಕನ್ನಡಿಗ ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣ ಪತ್ರ ನೀಡಿದೆ.
ಕೊರೊನಾ ಲಾಕ್ಡೌನ್ ಬಳಿಕ ಸೆನ್ಸಾರ್ ಬೋರ್ಡ್ ತಲುಪಿದ್ದ ಮೊದಲ ಸಿನಿಮಾ ಇದಾಗಿದ್ದು, ನವೆಂಬರ್ ನಲ್ಲಿ ಶೂಟಿಂಗ್ ಪ್ರಾರಂಭಿಸಿದ್ದು ಇದೀಗ ಕೊನೆಯ ಹಂತ ತಲುಪಿದೆ.
ಈ ಕುರಿತು ಮಾತನಾಡಿರುವ ನಿರ್ದೇಶಕ ಗಿರಿರಾಜ್, "ನಾನು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿದ್ದು,ಅದನ್ನು ನಾನು ಮೊದಲೇ ಸಿದ್ಧಪಡಿಸಿದ್ದೇನೆ ಮತ್ತು ಯೋಜನೆಯ ಪ್ರಕಾರ ಹೋಗಿದ್ದೇನೆ, ಕನ್ನಡಿಗ ಸಿನಿಮಾ ವಿವಿಧ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ" ಎಂದರು..
ಇನ್ನು ಈ ಸಿನಿಮಾದಲ್ಲಿ ಕನ್ನಡಿಗರ ಸಂಸ್ಕೃತಿ ಬಗ್ಗೆ ವಿವರಿಸಲಾಗಿದ್ದು, ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಪ್ರೊಡಕ್ಷನ್ ಹೌಸ್ ನಿರ್ಧರಿಸಿದೆ ಎಂದು ಗಿರಿರಾಜ್ ವಿವರಿಸಿದ್ದಾರೆ.
ಈ ಸಿನಿಮಾದ ಅಂತಿಮ ಹಂತದ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿದ್ದು, ಇದರಲ್ಲಿ ರವಿಚಂದ್ರನ್ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.