ಬೆಂಗಳೂರು, ಡಿ.05 (DaijiworldNews/HR): ಸ್ಯಾಂಡಲ್ವುಡ್ ನಟ ಚೇತನ್ ತೆಲುಗಿಗೆ ಎಂಟ್ರಿ ಕೊಟ್ಟಿದ್ದು, ಹೈದರಾಬಾದ್ನಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಚಿತ್ರತಂಡ ನೆರವೇರಿಸಿದೆ.
ಈ ಸಿನಿಮಾಕ್ಕೆ ಇನ್ನು ಹೆಸರು ನಿಗದಿಪಡಿಸಿಲ್ಲ, ಆದರೆ ಕನ್ನಡ ಭಾಷೆಯಲ್ಲಿಯೂ ಈ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ ಎಂಸು ತಿಳಿದು ಬಂದಿದೆ.
ಇನ್ನು ಈ ಸಿನಿಮಾ ಸಂಗೀತ ನಿರ್ದೇಶಕ ಸಾಯಿ ಕಾರ್ತಿಕ್ ಮತ್ತು ಶ್ರೀಕಾತ್ ಒಟ್ಟಾಗಿ ಸೇರಿ ಮಾಡುತ್ತಿದ್ದು, ಖ್ಯಾತ ಚಿತ್ರಕಥೆ ರಚನಾಕಾರ ಚಕ್ರವರ್ತಿ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಈ ಸಿನಿಮಾದಲ್ಲಿ ನಟ ಚೇತನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಲಿದ್ದು, ಉಳಿದ ನಟರೆಲ್ಲ ನಟರು ತೆಲುಗಿನವರೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.
ನಟ ಚೇತನ್ ಈ ಸಿನಿಮಾದ ಕುರಿತು ಪ್ರತಿಕ್ರಿಯಿಸಿ, "ಈ ಚಿತ್ರದಲ್ಲಿ ನನ್ನದು ವಿಭಿನ್ನವಾದ ಪಾತ್ರವಾಗಿದ್ದು, ಈ ರೀತಿಯಾದಂತಹ ಪಾತ್ರದಲ್ಲಿ ಇಲ್ಲಿಯವರೆ ನಟಿಸಿರಲಿಲ್ಲ. ಹಾಗಾಗಿ ಕಥೆ ಕೇಳಿದ ತಕ್ಷಣವೇ ನಟಿಸಲು ಒಪ್ಪಿಕೊಂಡೆ" ಎಂದು ಹೇಳಿದ್ದಾರೆ.