ಬೆಂಗಳೂರು, ಡಿ. 03 (DaijiworldNews/HR): ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ನಟ ಹೇಮಂತ್ ಎಂ ರಾವ್ ಅವರ "ಸಪ್ತ ಸಾಗರದಾಚೆ ಎಲ್ಲೋ" ಚಿತ್ರೀಕರಣ 2021ರ ಜನವರಿ ಎರಡನೇ ವಾರದಲ್ಲಿ ಪ್ರಾರಂಭವಾಗಲಿದೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ "ಈ ಚಿತ್ರದ ಎಲ್ಲಾ ಶೂಟಿಂಗ್ ಒಂದೇ ಸ್ಟ್ರೆಚ್ ನಲ್ಲಿ ನಡೆಯಲಿದ್ದು, ಇದನ್ನು ಸಂಪೂರ್ಣವಾಗಿ ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗುತ್ತದೆ" ಎಂದರು.
ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದು, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಅದ್ವೈತ ಗುರುಮೂರ್ತಿಛಾಯಾಗ್ರಹಣ ಮಾಡಲಿದ್ದು ಚಿತ್ರತಂಡವು ಉಳಿದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಡಿಸೆಂಬರ್ ಅಂತ್ಯದೊಳಗೆ ತಿಳಿಸಲಿದೆ.
ಇನ್ನು ರಕ್ಷಿತ್ ಶೆಟ್ಟಿ ಅವರು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮಾತ್ರವಲ್ಲದೆ ಕಿರಿಕ್ ಪಾರ್ಟಿಯ ಮುಂದಿನ ಭಾಗವಾದ "ರಿಚಿ ಸಿನಿಮಾದಲ್ಲಿಯೂ" ರಕ್ಷಿತ್ ಅಭಿನಯಿಸುತ್ತಿದ್ದಾರೆ. ಜೊತೆಗೆ "ಪುಣ್ಯಕೋಟಿ" ಹೆಸರಿನ ಚಿತ್ರವೊಂದರಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.