ಬೆಂಗಳೂರು, ಡಿ.02 (DaijiworldNews/MB) : "ಕೆಜಿಎಫ್" ಮೂಲಕ ದೇಶದ ಗಮನ ಸೆಳೆದಿರುವ ಸ್ಯಾಂಡಲ್ ವುಡ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಮುಂದಿನ ಚಿತ್ರ ಘೋಷಿಸಿದ್ದು ಈ ಚಿತ್ರದ ಮೂಲಕ ಟಾಲಿವುಡ್ನ ಬಾಹುಬಲಿ ಪ್ರಭಾಸ್ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದಾರೆ.
ಬುಧವಾರ ಈ ಬಗ್ಗೆ ಹೊಂಬಾಳೆ ಫಿಲಂಸ್ ಅಧಿಕೃತ ಘೋಷಣೆ ಮಾಡಿದ್ದಾರೆ. "ಸಲಾರ್" ಹೆಸರಿನ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿರುವ ಬಗ್ಗೆ "ಉಗ್ರಂ", "ಕೆಜಿಎಫ್" ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ಬುಧವಾರ ಘೋಷಿಸಿದರು.
ಚಿತ್ರದ ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಸಂಸ್ಥೆ ಇದೊಂದು ಆಕ್ಷನ್ ಚಿತ್ರ ಎಂದು ಹೇಳಿದ್ದು ಪ್ರಭಾಸ್ ಕೈನಲ್ಲಿ ಎಕೆ-47 ಇರುವ ಲುಕ್ ಕಾಣ ಬಹುದಾಗಿದೆ.
ಇನ್ನು ಈ ಸಿನಿಮಾದ ಚಿತ್ರೀಕರಣ ಮುಂದಿನ ಜನವರಿಯಲ್ಲಿ ಆರಂಭವಾಗಲಿದ್ದು ಪ್ರಭಾಸ್ ಅವರ ರಾಧೆ ಶ್ಯಾಂ ಚಿತ್ರ ಬಿಡುಗಡೆಯ ಬಳಿಕ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ನ ಮುಖ್ಯಸ್ಥ ವಿಜಯ್ ಕಿರಗಂದೂರು ಮಾಹಿತಿ ನೀಡಿದ್ದಾರೆ.