ಮುಂಬೈ, ನ. 29 (DaijiworldNews/MB) : ಬಾಲಿವುಡ್ ನಟ ಸೋನು ಸೂದ್ ಅಭಿಮಾನಿಯೋರ್ವರ ಹನ್ನೆರಡು ವರ್ಷದ ಸಮಸ್ಯೆಗೆ ಸೋನು ಸೂದ್ರವರು 11 ಗಂಟೆಯಲ್ಲಿ ಪರಿಹಾರ ಒದಗಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ತಮ್ಮ ಮನೆಗೆ ತಲುಪಲು ಸಹಾಯ ಹಸ್ತ ಚಾಚುವ ಮೂಲಕ ಮನೆಮಾತಾಗಿದ್ದ ಸೋನು ಸೂದ್ ಈಗ ತಮ್ಮ ಅಭಿಮಾನಿಯೋರ್ವರ ಚಿಕಿತ್ಸೆಗೆ ಸಹಾಯ ಮಾಡುವ ಮೂಲಕ 12 ವರ್ಷದಿಂದ ಅವರ ಅಭಿಮಾನಿ ಅಮನ್ಜಿತ್ ರವರು ಪಟ್ಟಿದ್ದ ಕಷ್ಟಕ್ಕೆ ಅಂತ್ಯ ಹಾಡಿದ್ದಾರೆ.
ಸೋನು ಸೂದ್ರ ಅಭಿಮಾನಿಯಾಗಿರುವ ಅಮನ್ಜಿತ್ ನರ ದೌರ್ಬಲ್ಯ ಸಮಸ್ಯೆಯಿಂದಾಗಿ ಮಾತನಾಡಲು ಆಗದ ಸ್ಥಿತಿಯಲ್ಲಿದ್ದರು. ಈ ವಿಚಾರವನ್ನು ತಿಳಿದ ಸೋನು ಸೂದ್ರವರು, ''12 ವರ್ಷದ ಕಷ್ಟ ದೂರವಾಯ್ತೆಂದು ತಿಳಿದುಕೊಳ್ಳಿ. ಚಿಕಿತ್ಸೆಗಾಗಿ ನೀವು ನವೆಂಬರ್ 20ರಂದು ಪ್ರಯಾಣಿಸುತ್ತಿದ್ದೀರಿ. ನವೆಂಬರ್ 24ರಂದು ನಿಮ್ಮ ಶಸ್ತ್ರಚಿಕಿತ್ಸೆ ನಡೆಯಲಿದೆ'' ಎಂದು ಹೇಳಿದ್ದರು.
ಶಸ್ತ್ರಚಿಕಿತ್ಸೆ ಬಳಿಕ ಟ್ವೀಟ್ ಮಾಡಿರುವ ವೈದ್ಯ ಅಶ್ವನಿಕುಮಾರ್, ''ಅಮನ್ಜಿತ್ ಗುಣಮುಖರಾಗುತ್ತಿದ್ದಾರೆ. ಸುಮಾರು 11 ಗಂಟೆಯ ದೀರ್ಘ ಶಸ್ತ್ರ ಚಿಕಿತ್ಸೆಯ ಬಳಿಕ ಅವರು ಈಗ ಚೇತರಿಸುತ್ತಿದ್ದಾರೆ. ನಿಮ್ಮ ಕಾಳಜಿ ಪ್ರೀತಿಗೆ ಧನ್ಯವಾದ''ವೆಂದು ಬರೆದು ಸೋನು ಸೂದ್ರಿಗೆ ಟ್ಯಾಗ್ ಮಾಡಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, ''ಇಂದಿನ ಶುಭ ಸುದ್ದಿ. 12 ವರ್ಷದ ಸಮಸ್ಯೆ 11 ಗಂಟೆಯಲ್ಲಿ ಪರಿಹಾರವಾಗಿದೆ'' ಎಂದು ವೈದ್ಯರಿಗೆ ಧನ್ಯವಾದ ತಿಳಿಸಿದ್ದಾರೆ.