ಬೆಂಗಳೂರು, ನ. 25 (DaijiworldNews/MB) : ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರರಂಗ ಈಗ ಮತ್ತೆ ಕಾರ್ಯ ಆರಂಭಿಸಿದೆ. ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಡಿಸೆಂಬರ್ ಮಧ್ಯದವರೆಗೂ ಶೂಟಿಂಗ್ ನಡೆಯಲಿದೆ.
ಆಗಸ್ಟ್ 26ರಿಂದ ಚಿತ್ರದ ಶೂಟಿಂಗ್ ಮತ್ತೆ ಆರಂಭವಾಗಿದ್ದು ಅಕ್ಟೋಬರ್ 8 ರಿಂದ ಯಶ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಈಗ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು ಉಳಿದ ಭಾಗಗಳನ್ನು ಪೂರ್ಣಗೊಳಿಸಲು ಸಂಜಯ್ ದತ್ ಡಿಸೆಂಬರ್ 6 ರಂದು ಸೆಟ್ಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆಜಿಎಫ್ ಭಾಗ ಒಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಕನ್ನಡ ಚಿತ್ರರಂಗದಲ್ಲೇ ಹೊಸ ಅಧ್ಯಾಯಕ್ಕೆ ಮೈಲಿಗಲ್ಲು ಹಾಕಿತ್ತು. ಈಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೇಲೆ ಜನರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವನ್ನು ವಿಜಯ್ ಕಿರಗಂದೂರ್ ನಿರ್ಮಿಸುತ್ತಿದ್ದಾರೆ. ದೊಡ್ಡ ಬಜೆಟ್ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಕಾಶ್ ರಾಜ್, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಬಿ ಸುರೇಶ್ ಮತ್ತು ಟಿ.ಎಸ್.ನಾಗಭಾರಣ ಪ್ರಮುಖ ಪಾತ್ರಗಳಾಗಿದ್ದಾರೆ.
ರವಿ ಬಸ್ರೂರ್ ಸಂಗೀತ ನೀಡಿದ್ದು ಭುವನಗೌಡರು ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ. ಕನ್ನಡದ ಕೆಆರ್ಜಿ ಸ್ಟುಡಿಯೋಸ್, ಹಿಂದಿಯಲ್ಲಿ ಎಕ್ಸೆಲ್ ಎಂಟರ್ಟೈನ್ಮೆಂಟ್ ಮತ್ತು ಎಎ ಫಿಲ್ಮ್ಸ್, ತೆಲುಗಿನ ವರಾಹಿ ಚಲನಾ ಚಿತ್ರಂ ಮತ್ತು ತಮಿಳಿನ ವಿಶಾಲ್ ಫಿಲ್ಮ್ ಫ್ಯಾಕ್ಟರಿ ವಿತ್ತರಿಸುತ್ತಿದೆ.