ಬೆಂಗಳೂರು, ನ.23 (DaijiworldNews/HR): ರಕ್ಷಿತ್ ಶೆಟ್ಟಿ, '777 ಚಾರ್ಲಿ' ಚಿತ್ರತಂಡ ಕೊನೆಯ ಹಂತದ ಶೂಟಿಂಗ್ಗಾಗಿ ಕಾಶ್ಮೀರಕ್ಕೆ ಪಯಣ ಬೆಳೆಸಿದೆ.
ರಕ್ಷಿತ್ ಶೆಟ್ಟಿ, 777 ಚಾರ್ಲಿ ಸಿನಿಮಾದ ಅಂತಿಮ ಹಂತದ ಶೂಟಿಂಗ್ ಗಾಗಿ ನಿರ್ದೇಶಕ ಕಿರಣ್ ರಾಜ್ ಸೇರಿದಂತೆ 56 ಮಂದಿ ಈಗಾಗಲೇ ಕಾಶ್ಮೀರ ತಲುಪಿದ್ದು, ರಕ್ಷಿತ್ ಶೆಟ್ಟಿ ನವೆಂಬರ್ 26 ರಂದು ಕಾಶ್ಮೀರ ತಲುಪಲಿದ್ದಾರೆ.
ಇನ್ನು ಕಾಶ್ಮೀರದಲ್ಲಿ 14 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು 2 ಭಾಗಗಳಾಗಿ ವಿಂಗಡಿಸಲಾಗಿದೆ, ಈ ವೇಳೆ ಕಾಶ್ಮೀರ, ಚಂಡಿಗಡ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ಸಿನಿಮಾಗೆ ಅಭಿಜಿತ್ ಮಹೇಶ್ ಸಂಭಾಷಣೆ ಬರೆದಿದ್ದು,ನೊಬಿಲ್ ಪೌಲ್ ಮತ್ತು ಅರವಿಂದ್ ಕಶ್ಯಪ್ ಸಂಗೀತ ನೀಡಿದದು, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್, ಮತ್ತು ಸಂಗೀತ ಶೃಂಗೇರಿ ತಾರಾಗಣದಲ್ಲಿದ್ದಾರೆ.