ಮಂಗಳೂರು, ನ. 22 (DaijiworldNews/HR): ಮುಂಬರುವ ತುಳು ಧಾರವಾಹಿ 'ಪಚ್ಚನಾಡಿ ಪೊಲೀಸ್ ಸ್ಟೇಷನ್' ಯ ಮೂಹೂರ್ತ ನವೆಂಬರ್ 21 ರಂದು ವಾಮಂಜೂರಿನಲ್ಲಿ ನಡೆಯಿತು.
'ಅಜನೆ' ಮತ್ತು 'ಹಾಯ್ ವಾತ್ ಸೊರ್ಗಾಚಿ ನೊಯ್' ಚಿತ್ರದ ನಿರ್ಮಾಪಕ ಜೀವನ್ ಡಿ ಸೋಜ ಏಂಜೆಲೋರ್ ಮತ್ತು ದೈಜಿವರ್ಲ್ಡ್ ಮೀಡಿಯಾ ಗ್ರೂಪ್ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಧಾರವಾಹಿಗೆ ಚಾಲನೆ ನೀಡಿದರು.
ದೈಜಿವರ್ಲ್ಡ್ ಟಿವಿಯ ವ್ಯವಸ್ಥಾಪಕ ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟೆಲಿನೊ, ಕೋಸ್ಟಲ್ವುಡ್ ನಿರ್ಮಾಪಕ ಮತ್ತು ನಟ ರಾನ್ ಲಂಡನ್, ದೈಜಿವರ್ಲ್ಡ್ ಟಿವಿಯ ನಿರ್ದೇಶಕ, ನಿರ್ಮಾಣ ನಿರ್ದೇಶಕ ಆಶಿತ್ ಪಿಂಟೋ, ನಟ ಅರವಿಂದ್ ಬೋಳಾರ್, ಕಣ್ ಕಟ್ ಧಾರಾವಾಹಿಯ ನಿರ್ದೇಶಕ ದಿನೇಶ್ ಅತ್ತಾವರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜೀವನ್ ಡಿ ಸೋಜಾ, “ಅಜನೆ ನಂತರ ಇದು ನನ್ನ ಎರಡನೇ ತುಳು ಧಾರಾವಾಹಿ, ಇದು ವೆಬ್ ಮಾಧ್ಯಮದಲ್ಲಿ ಪ್ರಸಾರ ಮಾಡಲು ಪ್ರತ್ಯೇಕವಾಗಿ ಯೋಜಿಸಲಾಗಿದೆ. ಕೊಂಕಣಿಯ ಪ್ರಸಿದ್ಧ ಹಾಸ್ಯನಟ ಮೆಲ್ಲು ವೇಲೆನ್ಸಿಯಾ ಅವರೊಂದಿಗೆ ಕೋಸ್ಟಲ್ವುಡ್ನ ಜನಪ್ರಿಯ ನಟ ಅರವಿಂದ್ ಬೋಳಾರ್ ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದು ನನಗೆ ಸಂತೋಷವಾಗಿದೆ. ಅನುಭವಿಗಳ ಜೊತೆಗೆ, ಈ ಧಾರಾವಾಹಿಯಲ್ಲಿ ಕೆಲವು ಹೊಸ ಮುಖಗಳು ಸಹ ಕಾಣಿಸಿಕೊಳ್ಳುತ್ತವೆ. 'ಪಚ್ಚನಾಡಿ ಪೊಲೀಸ್ ಸ್ಟೇಷನ್' ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಮನರಂಜನೆ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
ಸ್ಟ್ಯಾನಿ ಬೆಳಾ ಅವರು ಈ ಧಾರಾವಾಹಿಯ ಬರಹಗಾರ ಮತ್ತು ನಿರ್ದೇಶಕರಾಗಿದ್ದಾರೆ.
ಅರವಿಂದ್ ಬೋಲಾರ್ ಜೊತೆಗೆ, ಕೊಂಕಣಿಯ 'ಬಬುಟಿ' ಖ್ಯಾತಿಯ ಮೆಲ್ಲು ವೇಲೆನ್ಸಿಯಾ, ಉದಯೋನ್ಮುಖ ನಟರಾದ ಸಚಿನ್ ನಾಯಕ್, ಜಯಶ್ರೀ ಪುತ್ತೂರು, ಚೈತ್ರಾ, ಕಲ್ಲಡ್ಕ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಈ ಧಾರವಾಹಿಯಲ್ಲಿ ಕ್ಯಾಮರ ಮ್ಯಾನ್ಗಳಾಗಿ ಕಿರಣ್ ಕೇಪು, ದುರ್ಗಪ್ರಸಾದ್ ಕಕ್ಕೆಪದವು, ದಯಾನಂದ್ ಕುಕ್ಕಾಜೆ ಅವರಿದ್ದರೆ, ನೋಯೆಲ್ ಡಿಸೋಜ ಪುತ್ತೂರು ಧಾರಾವಾಹಿಯ ಸಂಪಾದಕರಾಗಿದ್ದರೆ, ಶ್ರೀಕಾಂತ್ ಶ್ರೀನಿವಾಸ್ ಧಾರಾವಾಹಿಯ ಡಬ್ಬಿಂಗ್ ಭಾಗವನ್ನು ನಿರ್ವಹಿಸುತ್ತಾರೆ. ಆಶಿತ್ ಗ್ಲೆನ್ ಪಿಂಟೊ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಪ್ರವೀಣ್ ತೌರೊ ಮಾರ್ಕೆಟಿಂಗ್ ಉಸ್ತುವಾರಿ ವಹಿಸಿದ್ದು, ಧಾರಾವಾಹಿಯ ಕೊನೆಯ ಹಂತದ ಕಾರ್ಯಗಳಾದ ಸಂಕಲನ ಮೊದಲಾದವುಗಳನ್ನು ದೈಜಿವರ್ಲ್ಡ್ ಆಡಿಯೋ ವಿಷುಯಲ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸಿದೆ.