ಬೆಂಗಳೂರು, ನ.21 (DaijiworldNews/HR): ಗೂಗಲ್ನಲ್ಲಿ ಈ ಹಿಂದೆ ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಎಂದು ಹುಡುಕಿದಾಗ ಪ್ರಿಯಾ ವಾರಿಯರ್ ಮತ್ತು ದಿಶಾ ಪಟಾನಿ ಕಾಣುತ್ತಿದ್ದರೆ, ಇದೀಗ ನಟಿ ರಶ್ಮಿಕಾ ಮಂದಣ್ನ "ನ್ಯಾಷನಲ್ ಕ್ರಶ್ ಆಫ್ ದಿ ಇಂಡಿಯಾ" ಎನಿಸಿಕೊಂಡಿದ್ದಾರೆ.
ಇದೀಗ ರಶ್ಮಿಕಾ ಮಂದಣ್ನ ಅವರು ಅನೇಕ ಕನ್ನಡ, ತೆಲುಗು ಸಿನಿಮಾಗಳ ಮೂಲಕ ಮನೆ ಮಾತಾಗಿದ್ದು, ನ್ಯಾಷನಲ್ ಕ್ರಶ್ ಆಫ್ ದಿ ಇಂಡಿಯಾ ಎಂದು ಎಣಿಸಿಕೊಂಡಿದ್ದಾರೆ.
ರಶ್ಮಿಕಾ ತೆಲುಗು ಸಿನಿಮಾ "ಪುಷ್ಪ" ದಲ್ಲಿ ನಟ ಅಲ್ಲು ಅರ್ಜುನ್ಗೆ ಜೋಡಿಯಾಗಿ ಅಭಿನಯಿಸುತ್ತಿದ್ದು, ಸದ್ಯ ಕನ್ನಡ ಸಿನಿಮಾ 'ಪೊಗರು' ನಲ್ಲಿ ಧ್ರುವ ಸರ್ಜಾ ಅವರೊಂದಿಗೆ ಅಭಿನಯಿಸಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಇನ್ನು ಅಷ್ಟೇ ಅಲ್ಲದೇ ರಶ್ಮಿಕಾ ಒಂದು ಹಿಂದಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.