ಮುಂಬೈ,ನ.20 (DaijiworldNews/HR): ಬಾಲಿವುಡ್ ನಟ ಮತ್ತು ನಿರ್ದೇಶಕ ಪ್ರಭುದೇವ ಅವರ ಮದುವೆಯ ಸುದ್ದಿ ಹರಿದಾಡುತ್ತಿದ್ದು, ಪ್ರಭುದೇವ ಅವರು ಫಿಜಿಯೋಥೆರಪಿಸ್ಟ್ ಒಬ್ಬರನ್ನು ಸೆಪ್ಟೆಂಬರ್ ನಲ್ಲೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಬಿಹಾರ್ ಮೂಲದ ಫಿಜಿಯೋಥೆರಪಿಸ್ಟ್ ಅನ್ನು ಮುಂಬೈನ ತಮ್ಮ ನಿವಾಸದಲ್ಲೇ ಪ್ರಭುದೇವ ಮದುವೆಯಾಗಿದ್ದು, ಈಗ ಸದ್ಯ ಅವರ ಪತ್ನಿ ಚೆನ್ನೈನ ನಿವಾಸದಲ್ಲಿ ವಾಸ ಮಾಡುತ್ತಿದ್ದು, ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನು ಪ್ರಭುದೇವ ಅವರು ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಲು ಫಿಜಿಯೋಥೆರಪಿಸ್ಟ್ ಬಳಿ ಹೋಗಿದ್ದು, ಈ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಪರಸ್ಪರ ಒಪ್ಪಿ ಕೆಲ ಕಾಲ ಡೇಟ್ ಮಾಡಿದ್ದಾರೆ. ನಂತರ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಭುದೇವ ಅವರ ನಿವಾಸದಲ್ಲೇ ಮದುವೆಯಾಗಿದ್ದಾರೆಂದು ತಿಳಿದು ಬಂದಿದೆ.
ಪ್ರಭುದೇವ ಅವರು ಮದುವೆ ವಿಚಾರದಲ್ಲಿ ಸುದ್ದಿಯಾಗುತ್ತಲೇ ಇದ್ದು, ಅವರು 1995ರಲ್ಲಿ ರಾಮಲತಾ ಅವರನ್ನು ವಿವಾಹವಾಗಿ ಈ ದಂಪತಿಗೆ ಮೂವರು ಮಕ್ಕಳು ಕೂಡ ಇದ್ದರು. ಬಳಿಕ ಈ ಜೋಡಿ 2011ರಲ್ಲಿ ವಿಚ್ಛೇದನ ಪಡೆದುಕೊಂಡಿತ್ತು.