ನವದೆಹಲಿ,ನ. 16 (DaijiworldNews/HR): ಬಾಲಿವುಡ್ ನಟ ಸೋನುಸೂದ್ ಅವರು ಕೊರೊನಾ ಲಾಕ್ಡೌನ್ ಅನುಭವದ ಕುರಿತು ‘ಐ ಆಮ್ ನಾಟ್ ಎ ಮೈಸೆ’ ಎಂಬ ಪುಸ್ತಕ ಬರೆದಿದ್ದು, ಮುಂದಿನ ತಿಂಗಳು ಪ್ರಕಟವಾಗಲಿದೆ.
ಕೊರೊನಾ ಲಾಕ್ಡೌನ್ ವೇಳೆ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ ಅನುಭವವನ್ನು ವಿವರಿಸುವ ಪುಸ್ತಕವನ್ನು ಬರೆಯುತ್ತಿದ್ದೇನೆ ಎಂದು ಈ ಹಿಂದೆ ಸೋನುಸೂದ್ ತಿಳಿಸಿದ್ದು, ಆ ಪುಸ್ತಕದಲ್ಲಿ ತಾನು ಸಹಾಯ ಮಾಡುವಾಗ ಎದುರಿಸಿದ ಭಾವನಾತ್ಮಕ ಸವಾಲುಗಳನ್ನು ಮತ್ತು ಅನುಭವಗಳನ್ನು ಬರೆದಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಸಹಾಯ ಮಾಡುವಾಗ ಕೆಲವರು ಪ್ರೀತಿಯಿಂದ ನನ್ನನ್ನು ವಲಸೆ ಕಾರ್ಮಿಕರ ಪಾಲಿನ ದೇವದೂತ ಎಂದು ಕರೆದಿದ್ದಾರೆ. ಆದರೆ ನಿಜಕ್ಕೂ ನಾನು ದೇವದೂತನಲ್ಲ ನನ್ನ ಹೃದಯ ನನಗೆ ಹೇಳುವುದನ್ನು ನಾನು ಸರಳವಾಗಿ ಮಾಡುತ್ತೇನೆ ಎಂದರು.
ಇನ್ನು ಮಾನವರಾದ ನಾವು ಪರಸ್ಪರ ಸಹಾಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅದೇ ಕಾರಣಕ್ಕೆ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಈ ಎಲ್ಲ ಅನುಭವಗಳನ್ನು ವಿವರಿಸುವ ಪುಸ್ತಕ ‘ಐ ಆಮ್ ನೋ ಮೆಸೈ’ ಮುಂದಿನ ತಿಂಗಳು ಬಿಡುಗಡೆಯಾಗಲಿದೆ ಎಂದು ನಟ ಸೋನುಸೋದ್ ತಿಳಿಸಿದ್ದಾರೆ.