ಬೆಂಗಳೂರು, ನ.12 (DaijiworldNews/HR): ಚಿರಂಜೀವಿಯವರ ಅಗಲಿಕೆಯ ನೋವನ್ನು ಮರೆಯಲು ಸಾಧ್ಯವೆ ಇಲ್ಲ, ಆದರೆ ನನ್ನ ಮಗುವನ್ನು ನೋಡಿದಾಗ ಚಿರು ಕಾಣಿಸ್ತಾರೆ, ನನ್ನ ಮಗುವೇ ನನಗೆ ಶಕ್ತಿ ಎಂದು ನಟಿ ಮೇಘನಾ ಹೇಳಿ ಕಣ್ಣೀರಿಟ್ಟಿದ್ದಾರೆ.
ಮಗುವಿನ ತೊಟ್ಟಿಲ ಶಾಸ್ತ್ರ ಇಂದು ನಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಷ್ಟದ ಸಮಯವನ್ನು ಎದುರಿಸುವುದನ್ನು ನಾನು ಚಿರುನಿಂದ ಕಲಿತಿದ್ದೇನೆ. ಚಿರು ಅವರು ನನ್ನ ಸಂತೋಷ. ಇನ್ನು ಮಗ ಬಂದಿರೋದು ಇನ್ನು ಸಂಭ್ರಮ ಬಂದಿದೆ ಎಂದರು.
ಇನ್ನು ಬಹಳ ದಿನಗಳ ಬಳಿಕ ನಾನು ಮಾಧ್ಯಮದ ಮುಂದೆ ಬಂದಿದ್ದೇನೆ. ನನ್ನನ್ನು ನೀವೆಲ್ಲ ಮನೆ ಮಗಳಾಗಿ ನೋಡಿದ್ದೀರಿ. ನಿಮಗೆ ಎಷ್ಟು ಸಮಯ ಕೊಟ್ಟರೂ ಸಾಲುವುದಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದು ಹೇಳಿದ್ದಾರೆ.