ಮುಂಬೈ, ನ. 11 (DaijiworldNews/MB) : ''ನನ್ನ ಪುತ್ರ ವಿಯಾನ್ ರಾಜ್ ಕುಂದ್ರಾನ ಪತ್ನಿ ನನ್ನ ಜೊತೆ ಚೆನ್ನಾಗಿದ್ದರೆ 20 ಕ್ಯಾರೆಟ್ ವಜ್ರ ಕೊಡ್ತೀನಿ'' ಎಂದು ಬಾಲಿವುಡ್ ನಟಿ, ಮಂಗಳೂರ ಸುಂದರಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ತನ್ನ ಪುತ್ರ 8 ವರ್ಷ ವಯಸ್ಸಿನ ವಿಯಾನ್ ರಾಜ್ ಕುಂದ್ರಾ ಅವರ ಭಾವಿ ಪತ್ನಿ ಮತ್ತು ಅವರ 8 ತಿಂಗಳಿನ ತನ್ನ ಪುತ್ರಿ ಸಮಿಷಾ ಪತಿ ಭಾವಿ ಅಳಿಯನ ಬಗ್ಗೆ ಮಾತನಾಡಿದ್ದಾರೆ.
ನನ್ನ ಸೊಸೆ ನನ್ನೊಂದಿಗೆ ಚೆನ್ನಾಗಿದ್ದರೆ ನಾನು 20 ಕ್ಯಾರೆಟ್ ವಜ್ರವನ್ನು ನೀಡುತ್ತೇನೆ ಎಂದು ನಾನು ಯಾವಾಗಲೂ ನನ್ನ ಪುತ್ರನಿಗೆ ಹೇಳುತ್ತೇನೆ'' ಎಂದು ತಿಳಿಸಿದ್ದಾರೆ.
11 ವರ್ಷಗಳ ಹಿಂದೆ ರಾಜ್ ಕುಂದ್ರಾ 5 ಕ್ಯಾರೆಟ್ ವಜ್ರದ ಉಂಗುರ ಹಿಡಿದು ಮದುವೆಯ ಪ್ರಸ್ತಾಪವನ್ನು ಮಾಡಿದ್ದರು. ಪ್ಯಾರಿಸ್ನ ಹೋಟೆಲ್ನಲ್ಲಿ ನಡೆದ ಔತಣಕೂಟದಲ್ಲಿ ಅವರು ನನ್ನನ್ನು ಆಶ್ಚರ್ಯಗೊಳಿಸಿದರು ಎಂದು ಇತ್ತೀಚೆಗೆ ಶಿಲ್ಪಾ ಶೆಟ್ಟಿ ತನ್ನ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು.