ಬೆಂಗಳೂರು, ನ.10 (DaijiworldNews/HR): ಜಯ್ ಮಿಲ್ಟನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮತ್ತೆ ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಡಾಲಿ ಧನಂಜಯ್ ಒಂದಾಗಿದ್ದು, ಇದೀಗ ಆ ಚಿತ್ರಕ್ಕೆ ಪೃಥ್ವಿ ಅಂಬರ್ ಕೂಡ ಎಂಟ್ರಿ, ಕೊಡುತ್ತಿದ್ದಾರೆ.
ದಿಯಾ ಸಿನಿಮಾದ ಹಿರೋ ಪ್ರಥ್ವಿ ಅಂಬಾರ್ ಇಡಿಗ ಕಿಟ್ಟಿ ಲೈಫ್ ಈಸ್ ಬ್ಯೂಟಿಫುಲ್, ಶುಗರ್ಲೆಸ್, ಫಾರ್ ರೆಗ್ನ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಇದೀಗ ವಿಜಯ್ ಮಿಲ್ಟನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಪೃಥ್ವಿ ಅವರಿಗೆ ಮುಂದಿನ ಬಹುದೊಡ್ಡ ಕಮರ್ಷಿಯಲ್ ಬ್ರೇಕ್ ಆಗಿರಲಿದೆ.
ಹೊಸ ಸಿನಿಮಾಕ್ಕೆ ಶಿವಣ್ಣ ಮತ್ತು ಧನಂಜಯ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳಲಿದ್ದು, ಚಿತ್ರದ ಚಿತ್ರೀಕರಣವು ನವೆಂಬರ್ ಅಂತ್ಯದ ವೇಳೆಗೆ ಪ್ರಾರಂಭವಾಗಲಿದೆ.
ಇನ್ನು ಈ ಸಿನಿಮಾದಲ್ಲಿ ಪೃಥ್ವಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರವಿದೆ ತಿಳಿದಿದ್ದು, ಪ್ರಮುಖ ನಾಯಕಿ ಮತ್ತು ಉಳಿದ ಪೋಷಕ ಪಾತ್ರಗಳಿಗಾಗಿ ಮಾತುಕತೆ ನಡೆಯುತ್ತಿದೆ.
ಕೃಷ್ಣ ಸಾರ್ಥಕ್ ನಿರ್ಮಿಸುತ್ತಿರುವ ಈ ಚಿತ್ರ ಶಿವರಾಜ್ ಕುಮಾರ ಅವರ 123ನೇ ಚಿತ್ರವಾಗಿದೆ. ಇನ್ನು ಇದೀಗ ರತ್ನನ್ ಪ್ರಪಂಚ ಚಿತ್ರದ ಚಿತ್ರೀಕರಣದಲ್ಲಿರುವ ಧನಂಜಯ್ ಈ ಚಿತ್ರದಲ್ಲಿ ತಮ್ಮ ಪಾತ್ರದ ಚಿತ್ರೀಕರಣವಿರುವಾಗ ಸೆಟ್ ಸೇರಿಕೊಳ್ಳಲಿದ್ದಾರೆ. ಚಿತ್ರದ ಸಂಗೀತವನ್ನು ಅನೂಪ್ ಸೀಳನ್ ವಹಿಸಿದ್ದಾರೆ.