ಮಂಗಳೂರು, ನ. 06 (DaijiworldNews/HR): ಬಹುನಿರೀಕ್ಷಿತ ತುಳು ಸಿನಿಮಾ 'ಪೆಪ್ಪೆರೆರೆ ಪೆರೆರೆರೆ' ಡಿಸೆಂಬರ್ 18 ರಂದು ಒಟಿಟಿ ಪ್ಲಾಟ್ಫಾರ್ಮ್ ಮೂಲಕ ಪ್ರದರ್ಶನಗೊಳ್ಳಲಿದೆ.
ಪೆಪ್ಪೆರೆರೆ ಪೆರೆರೆರೆ ಸಿನಿಮಾವು ಕೋಸ್ಟಲ್ವುಡ್ ಚಲನಚಿತ್ರೋದ್ಯಮದ ಇತಿಹಾಸದಲ್ಲಿ ಒಟಿಟಿ ಪ್ಲಾಟ್ಫಾರ್ಮ್ ಮೂಲಕ ಪ್ರದರ್ಶನಗೊಂಡ ಮೊದಲ ಚಿತ್ರವಾಗಿದೆ.
ಈ ಸಿನಿಮಾದ ಜನಪ್ರಿಯ 'ಅಥಲಾ ವಿಥಲ ಶೂರಾ ಮರ್ವಾಯ್ ಮಗಾ ದೀರಾ' ಹಾಡನ್ನು ತುಳು ಹಾಸ್ಯನಟ ಉಮೇಶ್ ಮಿಜರ್ ಬರೆದಿದ್ದು, ಭೋಜರಾಜ್ ವಾಮಂಜೂರ್ ಹಾಡಿದ್ದಾರೆ ಮತ್ತು ಗುರು ಬಾಯರ್ ಸಂಗೀತ ಸಂಯೋಜಿಸಿದ್ದು, ಈ ಹಾಡು ಜಾಮಾಜಿಕ ಜಾಲತಾಣಗಳ ಮೂಲಕ 45 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.
ವಿಶ್ವದಾದ್ಯಂತ, ತುಳು ಸಿನಿಮಾ ಪ್ರಿಯರಿಗೆ ತಲುಪಿಸುವ ಉದ್ದೇಶದಿಂದ ನಿಶಾನ್ ವರುಣ್ ಮೂವೀಸ್, ಒಟಿಟಿ ಪ್ಲಾಟ್ಫಾರ್ಮ್ ಮೂಲಕ ಚಲನಚಿತ್ರವನ್ನು ಪ್ರದರ್ಶಿಸಲು ಯೋಜಿಸಿದ್ದು, ಇದರಿಂದಾಗಿ ಅತ್ಯಂತ ಹೆಚ್ಚು ಸಂಖ್ಯೆಯ ಪ್ರೇಕ್ಷಕರನ್ನುಈ ಸಿನಿಮಾ ತಲುಪುತ್ತದೆ.
ನಿರ್ಮಾಪಕ ನಿಶಾನ್ ಮಾತನಾಡಿ, 'ಪೆಪ್ಪೆರೆರೆ ಪೆರೆರೆರೆ' ಸಿನಿಮಾ 90% ಹಾಸ್ಯ, 5% ಥ್ರಿಲ್ ಮತ್ತು 5% ಸಸ್ಪೆನ್ಸ್ ಅನ್ನು ಒಳಗೊಂಡಿದೆ. ಪ್ರೇಕ್ಷಕರು ಈ ಸಿನಿಮಾ ವೀಕ್ಷಿಸಲು https://www.nishanvarunmovies.com ಮೂಲಕ 249 ರೂ.ಗಳನ್ನು ಪಾವತಿಸಿ ಟಿಕೆಟ್ ಬುಕ್ ಮಾಡಬಹುದು. ಬಳಿಕ ಅವರಿಗೆ ಒಂದು ಲಿಂಕ್ ಅನ್ನು ಸಂದೇಶದ ಮೂಲಕ ಕಳುಹಿಸಲಾಗುತ್ತದೆ. ಬಳಿಕ ಅದೇ ವ್ಯಕ್ತಿಯು ಇತರ 10 ಜನರಿಗೆ ಅದೇ ಲಿಂಕ್ ಕಳುಹಿಸಿದರೆ ಮತ್ತು ಅವರು ಟಿಕೆಟ್ ತೆಗೆದುಕೊಳ್ಳುವಂತೆ ಮಾಡಿದರೆ 249 ರೂ. ಮೊತ್ತವನ್ನು ಅವರ ಖಾತೆಗೆ ಮರುಪಾವತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕೊರೊನಾ ಸಮಯದಲ್ಲಿ, ಇಡೀ ಕುಟುಂಬವು ತಮ್ಮ ಮನೆಯಲ್ಲೇ ಕೂತು 249 ರೂ. ಗಳಿಗೆ ಈ ಚಲನಚಿತ್ರವನ್ನು ವೀಕ್ಷಿಸಬಹುದು. ಚಲನಚಿತ್ರಕ್ಕಾಗಿ ಚಿತ್ರಮಂದಿರಕ್ಕೆ ಹೋಗಲು ಒಂದು ಕುಟುಂಬಕ್ಕೆ ಕನಿಷ್ಠ 2,000 ರೂ. ಬೇಕಾಗುತ್ತದೆ. ಆದರೆ ಈ ಸಿನಿಮಾವನ್ನು 249 ರೂ. ಪಾವತಿಸಿ ಇಡೀ ಕುಟುಂಬವೇ ನೋಡಬಹುದಾಗಿದೆ.
ಈ ಸಿನಿಮಾದಲ್ಲಿ 75 ಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ನಾಲ್ಕು ಹಾಡುಗಳನ್ನು ಹೊಂದಿದೆ.
ಕೋಸ್ಟಲ್ವುಡ್ ಸೂಪರ್ಸ್ಟಾರ್ಗಳಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸತೀಶ್ ಬಂದಳೆ, ಸಾಯಿ ಕೃಷ್ಣ, ಜೆ.ಪಿ.ತುಮಿನಾಡ್ ಮತ್ತು ಇತರರು ಚಿತ್ರದಲ್ಲಿದ್ದಾರೆ. ಚೈತ್ರಾ ಶೆಟ್ಟಿ ನಾಯಕಿಯಾಗಿದ್ದಾರೆ. ಶೋಭರಾಜ್ ಪಾವೂರ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಪ್ರಮುಖ ಪಾತ್ರದಲ್ಲಿದ್ದಾರೆ. ಗುರು ಬಾಯರ್ ಸಂಗೀತ ನೀಡಿದ್ದಾರೆ.
ಇನ್ನು ಈ ಸಿನಿಮಾವನ್ನು ಎಕ್ಕೂರು ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.
ಇನ್ನು ದಾಯ್ಜಿವರ್ಲ್ಡ್ ಜೊತೆ ಮಾತನಾಡಿದ ನಿರ್ದೇಶಕ ಶೋಭರಾಜ್ ಪಾವೂರ್, ತುಳು ರಂಗಭೂಮಿ ಮತ್ತು ಕೋಸ್ಟಲ್ವುಡ್ ನ ಅನೇಕ ಹಾಸ್ಯ ಕಲಾವಿದರು ಈ ಚಿತ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿದ್ದಾರೆ ಎಂದರು.
ಹೆಚ್ಚಿನ ವಿಚಾರಣೆಗಾಗಿ, ಕರೆ ಮಾಡಿ:
8884687222
8884795111
8884796222
8884792111
8884798222