ಬೆಂಗಳೂರು, ನ. 05 ( DaijiworldNews/HR): ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಒಡೆತನದ ಪರಮಾವ್ ಸ್ಟುಡಿಯೋ ನಿರ್ಮಾಣ ಸಂಸ್ಥೆಯಿಂದ ಇದೀಗ ವೆಬ್ ಸಿರಿಸ್ ಗೆ ಸಿದ್ಧತೆ ನಡೆಸಲಾಗುತ್ತಿದ್ದು, ಆ ಮೂಲಕ ರಕ್ಷಿತ್ ಶೆಟ್ಟಿ ಸಿನಿಮಾಗಳ ಜೊತೆಗೆ ಆನ್ ಲೈನ್ ಸ್ಟ್ರೀಮಿಂಗ್ ಕಡೆಗೂ ಗಮನ ಹರಿಸುತ್ತಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಬ್ಯಾನರ್ ನಲ್ಲಿ ಬರುತ್ತಿರುವ ಮೊದಲ ವೆಬ್ ಸಿರೀಸ್ ಇದಾಗಿದ್ದು, ಏಕಂ ವೆಬ್ ಸಿರೀಸ್ 8 ಎಪಿಸೋಡ್ ಇದ್ದು, ಇದಕ್ಕಾಗಿ ಹೊಸ ಪ್ರತಿಭೆಗಳಿಗಾಗಿ ಶೋಧ ನಡೆಸಿದ್ದಾರೆ, ಸುಮಂತ್ ಭಟ್ ಇದರಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ದಿ ಸೆವೆನ್ ಓಡ್ಸ್ ಬರಹಗಾರರಲ್ಲಿ ಸುಮಂತ್ ಭಟ್ ಒಬ್ಬರಾಗಿದ್ದು, ಏಕಮ್ ಕರಾವಳಿಯಲ್ಲಿ ಬೆಲ್ಟ್ ನ ಕಥೆಯಾಗಿದೆ, ಇಡೀ ಕಥೆ ಕರಾವಳಿ ಭಾಗ ಆಧರಿಸಿದೆ ಎಂದು ಸುಮಂತ್ ತಿಳಿಸಿದ್ದಾರೆ.
ಈ ಸಿರಿಸ್ ನ ಎಲ್ಲಾ ಶೂಟಿಂಗ್ ಕರಾವಳಿ ಪ್ರದೇಶದಲ್ಲಿಯೇ ನಡೆಯಲಿದ್ದು, ಈ ಭಾಗದ ಜನರೊಂದಿಗೆ ಇದು ಕನೆಕ್ಟ್ ಆಗಲಿದೆ. ನಾವು ಕಥೆ ಬಗ್ಗೋ ನೋಡುವುದಾದರೇ ಇದೊಂದು ಪ್ಯಾನ್ ಇಂಡಿಯಾ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.