ಬೆಂಗಳೂರು, ಅ. 29 (DaijiworldNews/HR): ಕನಸು ಮಾರಾಟಕ್ಕಿದೆ ಸಿನಿಮಾದಲ್ಲಿ ವಿಶೇಷವಾಗಿ ಕಾಲೇಜು ಹುಡುಗರಿಗಾಗಿ ರಚಿಸಿರುವ ಪುಂಡಿ ಹಾಡು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಸಕ್ಕತ್ ಸೌಂಡ ಮಾಡುತ್ತಿದೆ.
ಯೂಟ್ಯೂಬ್ ಚಾನೆಲ್ ನಲ್ಲಿ" ಕನಸು ಮಾರಾಟಕ್ಕಿದೆ" ಚಿತ್ರದ ಮತ್ತೊಂದು 'ಪುಂಡಿ ಪುಂಡಿ' ಎನ್ನುವ ಮಾಸ್ ಹಾಡನ್ನು ಕನ್ನಡ ಚಿತ್ರ ರಂಗದ ಸಂಗೀತ ನಿರ್ದೇಶಕರಾದ ವಿ. ಮನೋಹರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.
ಪುಂಡಿ ಪುಂಡಿ ಹಾಡಿನ ಸಾಹಿತ್ಯಕ್ಕೆ ಮಾನಸ ಹೊಳ್ಳಾ ಅವರು ಸಂಗೀತ ಸಂಯೋಜನೆ ಮಾಡಿದ್ದು, ಹಾಡಿನ ಸಾಹಿತ್ಯವನ್ನು ಸುಕೇಶ್ ಶೆಟ್ಟಿ ವಿಭಿನ್ನ ರೀತಿಯಲ್ಲಿ ಯುವ ಜನತೆಗೆ ಇಷ್ಟವಾಗುವಂತೆ ರಚಿಸಿದ್ದಾರೆ, ಹಾಗೂ ಹಾಡಿನ ಸಾಹಿತ್ಯಕ್ಕೆ ಸರಿಗಮಪ ಖ್ಯಾತಿಯ ಶ್ರೀ ಹರ್ಷ, ಹಾಗೂ ಶಶಾಂಕ್ ಶೇಷಗಿರಿ, ಹಾಗೂ ಶುಭಾ ರಾಘವೇಂದ್ರ ಅವರು ಹಾಡಿದ್ದಾರೆ.
ಇನ್ನು ಈ ಗೀತೆಯು ಪಕ್ಕಾ ಮಾಸ್ ಹಾಗೂ ಹಾಸ್ಯ ಭರಿತವಾಗಿದ್ದು, ಜನರ ಮನಸ್ಸು ಮುಟ್ಟುತ್ತಿದೆ, ಕೆಲವು ದಿನಗಳ ಹಿಂದೆ ವಿಜಯ ಪ್ರಕಾಶ್ ಅವರು ಹಾಡಿದ ಕನಸ ಬೆನ್ನೇರಿ ಹಾಡು ಚಿತ್ರ ತಂಡ ಬಿಡುಗಡೆ ಮಾಡಿದ್ದು ಅದು ಕೂಡ ಸೋಶಿಯಲ್ ಮೀಡಿಯಾದಲ್ಲಿ ತೊಂಬಾನೇ ಸದ್ದು ಮಾಡಿದ್ದು, ಪುಂಡಿ ಪುಂಡಿ ಹಾಡು ಕೂಡ ಸಖತ್ ಸದ್ದು ಮಾಡುತ್ತಿದೆ.