ಬೆಂಗಳೂರು,ಅ. 24 (DaijiworldNews/HR): ದಿವಗಂತ ನಟ ಚಿರಂಜೀವಿ ಸರ್ಜಾಗೆ ಗಂಡು ಮಗು ಜನಿಸಿದ್ದು, ಮಗುವನ್ನು 20 ವರ್ಷದ ಬಳಿಕ ನಾನೇ ಬಹುಶಃ ಸಿನಿಮಾಕ್ಕೆ ಲಾಂಚ್ ಮಾಡ್ತೀನಿ ಎಂದು ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.
ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಅರ್ಜುನ್ ಸರ್ಜಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚಿರು ಮಗನನ್ನು ನಾನೇ ಬಹುಶಃ 20 ವರ್ಷದ ಬಳಿಕ ಲಾಂಚ್ ಮಾಡ್ತೀನಿ. ಸೀಮಂತದ ಸಮಯದಲ್ಲಿ ವೆಲ್ಕಮ್ ಜೂನಿಯರ್ ಚಿರು ಅಂತ ಎಲ್ಲರೂ ಹಾಡಿದ್ವಿ. ನಮಗೂ ಗಂಡು ಮಗು ಆಗುತ್ತೆ ಅಂತ ಗೊತ್ತಿರಲಿಲ್ಲ ಎಂಬುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.
ನಾಲ್ಕು ತಿಂಗಳಿನಿಂದ ಕಗ್ಗತ್ತಲಿನಂತಿದ್ದ ನಮ್ಮ ಬದುಕಲ್ಲಿ ಇದೀಗ ಮಗುವಿನ ಜನನದಿಂದ ಹೊಸ ಹುರುಪು ಬಂದಿದೆ, ಚಿರು ಈ ಸಮಯದಲ್ಲಿ ಇರಬೇಕಾಗಿತ್ತು ಈ ಸಂಭ್ರಮ ನೋಡಬೇಕಿತ್ತು ಎಂದರು.
ಇನ್ನು 36 ವರ್ಷಗಳ ಹಿಂದೆ ಚಿರು ಹುಟ್ಟಿದಾಗ ಶೂಟಿಂಗ್ ನಲ್ಲಿದ್ದ ನಾನು ಸಂತೋಷದಿಂದ ಚೆನ್ನೈಯಿಂದ ಅವನ್ನು ನೋಡಲು ಓಡಿ ಬಂದಿದ್ದೆ. ಈಗ ಅವನ ಮಗುವನ್ನು ನೋಡಲು ಬರುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ಹೇಳಲಾಗದಷ್ಟು ಸಂತೋಷವಾಗಿದೆ ಎಂದು ಹೇಳಿದ್ದಾರೆ.