ಬೆಂಗಳೂರು,ಅ. 20 (DaijiworldNews/HR): ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಚ್ಚಿ ಸಿನಿಮಾದ ಟೈಟಲ್ ವಿವಾದದ ಕುರಿತು ನಟ ರಕ್ಷಿತ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
ಈ ಕುರಿತು ನಿರ್ದೇಶಕ ಹೇಮಂತ್ ದೂರು ನೀಡಿದ್ದು, ರಿಚ್ಚಿ ಟೈಟಲ್ ರಕ್ಷಿತ್ ಶೆಟ್ಟಿಗೂ ಮೊದಲೇ ಎರಡು ವರ್ಷಗಳ ಹಿಂದೆ ನಾವು ರಿಜಿಸ್ಟರ್ ಮಾಡಿಸಿದ್ದು, ಟೈಟಲ್ ರಿನಿವಲ್ ಕೂಡ ಆಗಿದೆ. ಆದರೆ ರಕ್ಷಿತ್ ಶೆಟ್ಟಿ ಕೂಡ ರಿಚ್ಚಿ ಟೈಟಲ್ನ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಈ ಟೈಟಲ್ ಅನ್ನು ರಕ್ಷಿತ್ ಅವರಿಗೆ ಗೊತ್ತಿಲ್ಲದೆ ಅನೌನ್ಸ್ ಮಾಡಿರಬಹುದು. ಆದರೆ ಈಗಲಾದರೂ ಅವರು ಟೈಟಲ್ ವಾಪಸ್ ತೆಗೆದುಕೊಳ್ಳಬೇಕು ಎಂದು ಚೇಂಬರ್ ಮೂಲಕ ಮನವಿ ಮಾಡಿದ್ದೇವೆ ಎಂದರು.
ಇನ್ನು ನಮ್ಮ ಬಳಿ ಟೈಟಲ್ ರಿಜಿಸ್ಟರ್ ಆಗಿರುವ ಎಲ್ಲಾ ದಾಖಲೆಗಳು ಸರಿಯಾಗಿದೆ. ಕೊನೆಯ ಕ್ಷಣದಲ್ಲಿ ನಮಗೆ ಈ ರೀತಿಯಾದರೆ ತುಂಬಾ ತೊಂದರೆ ಆಗುತ್ತೆ ಎಂದು ಹೇಮಂತ್ ಹೇಳಿದ್ದಾರೆ.