ಬೆಂಗಳೂರು,ಅ.18 (DaijiworldNews/HR): ಯೋಗರಾಜ್ ಭಟ್ ಹಾಗೂ ಶಿವರಾಜ್ ಕುಮಾರ್ ಸೇರಿ ಹೊಸ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾಗೆ ಪ್ರಭುದೇವ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಯೋಗರಾಜ್ ಭಟ್ರು ಈ ಸಿನಿಮಾದ ಕೆಲಸಗಳನ್ನು ಆರಂಭಿಸಿದ್ದು, ಈ ಸಿನಿಮಾದಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಹಲವು ವರ್ಷಗಳ ಬಳಿಕ ಪ್ರಭುದೇವ ಕನ್ನಡಕ್ಕೆ ರೀ ಎಂಟ್ರಿ ಆಗುತ್ತಿದ್ದಾರೆ.
ಈಗಾಲೇ ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ್ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಕಥೆಯನ್ನು ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಸಿನಿಮಾದಲ್ಲಿ ನಟಿಸುವ ಬಗ್ಗೆ ಖಚಿತಪಡಿಸಿಲ್ಲವಂತೆ. ಈ ಪ್ರಭುದೇವ ಆಗಮನದ ಸುದ್ದಿ ತಿಳಿದ ಶಿವರಾಜ್ ಕುಮಾರ್ ಹಾಗೂ ಭಟ್ರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಇನ್ನು ಶಿವರಾಜ್ ಅವರಿಗೆ ಭಜರಂಗಿ-2 ಮಾತ್ರವಲ್ಲದೆ ಈಗಾಗಲೇ ಸಾಲು ಸಾಲು ಸಿನಿಮಾಗಳಿವೆ. ಎಲ್ಲ ಚಿತ್ರಗಳು ಪೂರ್ಣಗೊಂಡ ಬಳಿಕ ಯೋಗರಾಜ್ ಭಟ್ ಜೊತೆಗಿನ ಸಿನಿಮಾದಲ್ಲಿ ತೊಡಗಿಕೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.