ಮುಂಬೈ,ಅ. 16 (DaijiworldNews/HR): ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಬಾಲಿವುಡ್ ನಟ ಸಂಜಯ್ ದತ್ ಇದೀಗ ಕೆಜಿಎಫ್-2ಗಾಗಿ ತಯಾರಿ ಮಾಡಿಕೊಳ್ಳುತ್ತಿರುವ ಸಂದೇಶ ನೀಡಿದ್ದಾರೆ.
ಕೆಜಿಎಫ್-2 ಸಿನಿಮಾದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜಯ್ ದತ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಇನ್ನು ಸಂಜಯ್ ದತ್ ಅವರು ಮೂರು ಫೋಟೋಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧೀರನಿಗಾಗಿ ತಯಾರಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನವೆಂಬರ್ ನಲ್ಲಿ ಆರಂಭವಾಗಲಿರುವ ಕೆಜಿಎಫ್-2 ಅಧೀರನ ಶೂಟಿಂಗ್ ಸಿದ್ಧವಾಗಿದ್ದೇನೆ ಎಂಬ ತಿಳಿಸಿದ್ದಾರೆ.
ಸಂಜಯ್ ದತ್ ಕೊರೊನಾ ಲಾಕ್ಡೌನ್ಗೂ ಮುನ್ನ ಕೆಜಿಎಫ್-2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಂತರ ಅವರಿಗೆ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿ ಆಸ್ಪತ್ರೆ ಸೇರಿದ್ದರು. ಇದರಿಂದ ಮತ್ತೆ ಅವರು ಬಂದು ಶೂಟಿಂಗ್ಗೆ ಸೇರಿಕೊಳ್ಳುತ್ತಾರಾ ಎಂಬ ಅನುಮಾನಗಳು ಮೂಡಿದ್ದವು. ಆದರೆ ಈಗ ಅವರು ಮುಂಬೈಗೆ ವಾಪಸ್ ಬಂದಿದ್ದು, ಸಲೂನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.