ಮುಂಬೈ,ಅ.15 (DaijiworldNews/HR): ಕ್ಯಾನ್ಸರ್ ರೋಗವನ್ನು ಆದಷ್ಟು ಬೇಗ ಸೋಲಿಸಿ ಹೋರ ಬರುತ್ತೇನೆ ಎಂದು ಬಾಲಿವುಡ್ ನಟ ಸಂಜಯ್ ದತ್ ಹೇಳಿದ್ದಾರೆ.
ಸಂಜಯ್ ದತ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊದಲ್ಲಿ ಪ್ರಸಿದ್ಧ ಕೇಶ ವಿನ್ಯಾಸಕ ಆಲಿಮ್ ಹಕೀಮ್ ಅವರ ಸಲೂನ್ ನಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿದ್ದ ದೃಶ್ಯಗಳಿದ್ದು, ಅದರಲ್ಲಿ ಕ್ಷೌರ ಮಾಡುವಾಗ ಹಕೀಮ್ ಗಾಯ ಮಾಡಿದ್ದರ ಬಗ್ಗೆ ನಟ ಹೇಳಿದ್ದು, ಇದು ನನ್ನ ಜೀವನದಲ್ಲಿನ ಇತ್ತೀಚಿನ ಗಾಯವಾಗಿದೆ. ನಾನು ಶೀಘ್ರದಲ್ಲೇ ಈ ಕ್ಯಾನ್ಸರ್ ನಿಂದ ಹೊರಬರುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಸಡಕ್ 2 ನಲ್ಲಿ ಕಾಣಿಸಿಕೊಂಡ ಸಂಜಯ್ ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಣಬೀರ್ ಕಪೂರ್ ಅಭಿನಯದ ಶಂಶೇರ್ ನಲ್ಲಿಯೂ ಅಭಿನಯಿಸಿದ್ದಾರೆ.