ಬೆಂಗಳೂರು,ಅ. 12 (DaijiworldNews/HR): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಚಿತ್ರೀಕರಣ ಈ ವಾರದಿಂದ ಪುನರ್ ಆರಂಭಿಸಲಿದ್ದು, ಈ ಸಿನಿಮಾದಲ್ಲಿ ಅನೇಕ ಪ್ರಸಿದ್ಧ ಕಲಾವಿದರು ಅಭಿನಯಿಸುತ್ತಿದ್ದಾರೆ.
ಚೇತನ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ ಶ್ರೀಕಾಂತ್ ಪ್ರಮುಖಪಾತ್ರದಲ್ಲಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಶ್ರೀಕಾಂತ್ ಫೀಪಲ್ಸ್ ಎನ್ ಕೌಂಟರ್ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದು, ನಾಯಕ ನಟನಾಗಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಮೊದಲ ಬಾರಿಗೆ ಕನ್ನಡದಲ್ಲಿ ಹೆಂಡ್ತಿ ಹೇಳಿದರೆ ಕೇಳಬೇಕು ಅಭಿನಯಿಸಿದ್ದ ಶ್ರೀಕಾಂತ್, 2007ರಲ್ಲಿ ಯುಗಾದಿ ಚಿತ್ರದಲ್ಲೂ ರವಿಚಂದ್ರನ್ ಜೊತೆಗೆ ನಟಿಸಿದ್ದರು. ಪ್ರೇಮ್ ನಿರ್ದೇಶನದ ವಿಲನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ಜೊತೆಗೆ ಅಭಿನಯಿಸಿದ್ದರು.