ಮುಂಬೈ, ಅ. 10 (DaijiworldNews/HR): ವಿಶ್ವ ಮಾನಸಿಕ ಆರೋಗ್ಯ ದಿನದ ಕುರಿತು ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿದ್ದು, ಅದರಲ್ಲಿ ಪರೋಕ್ಷವಾಗಿ ದೀಪಿಕಾ ಪಡುಕೋಣೆ ಅವರ ಕಾಲೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಾವು ಮಾಡಿದ ಸಿನಿಮಾವನ್ನು 'ಖಿನ್ನತೆಯ ಅಂಗಡಿ ನಡೆಸುವವರು' ಮಾನಸಿಕ ಆರೋಗ್ಯ ಜಾಗೃತಿಗಾಗಿ ನ್ಯಾಯಾಲಯಕ್ಕೆ ಎಳೆದೊಯ್ದಿದ್ದಾರೆ. ತಾವು ನಟಿಸಿರುವ ಜಡ್ಜ್ಮೆಂಟಲ್ ಹೈ ಕ್ಯಾ ಚಿತ್ರವನ್ನು ವೀಕ್ಷಿಸಲು ಇದೇ ವೇಳೆ ಅಭಿಮಾನಿಗಳಿಗೆ ಹೇಳಿದ್ದು, ಈ ಮೊದಲು ಈ ಸಿನಿಮಾಗೆ ಮೆಂಟಲ್ ಹೈ ಕ್ಯಾ ಎಂಬ ಶೀರ್ಷಿಕೆಯನ್ನು ಇಡಲಾಗಿತ್ತು. ಆದರೆ ಕೆಲವರು ಆ ಹೆಸರನ್ನು ಬದಲಿಸುವಂತೆ ಪ್ರತಿಭಟಿಸಿದ ನಂತರ ಜಡ್ಜ್ಮೆಂಟಲ್ ಹೈ ಕ್ಯಾ ಎಂದು ಬದಲಿಸಲಾಯಿತು ಎಂದರು.
ಇನ್ನು ಮಾನಸಿಕ ಆರೋಗ್ಯ ಜಾಗೃತಿಗಾಗಿ ನಾವು ಮಾಡಿದ ಚಿತ್ರವನ್ನು ಖಿನ್ನತೆಯ ಅಂಗಡಿ ನಡೆಸುವವರು ನ್ಯಾಯಾಲಯಕ್ಕೆ ಎಳೆದೊಯ್ದರು. ಹಾಗಾಹಿ ಬಿಡುಗಡೆಗೂ ಮೊದಲು ಸಿನಿಮಾದ ಹೆಸರನ್ನು ಬದಲಿಸಬೇಕಾಯಿತು. ಇದಕ್ಕೆ ಮಾರ್ಕೆಟಿಂಗ್ ತೊಂದರೆಗಳು ಬಂದವು. ಆದರೆ ಇದು ಒಂದು ಒಳ್ಳೆಯ ಸಿನಿಮಾವಾಗಿದ್ದು ಎಲ್ಲರೂ ವೀಕ್ಷಿಸಿ ಎಂದು ತಮ್ಮ ಅಭಿಮಾನಿಗಳಿಗೆ ರಣಾವತ್ ಹೇಳಿದ್ದಾರೆ.