ಮಂಗಳೂರು, ಅ. 08 (DaijiworldNews/MB) : ಲೋಕಕ್ಕೆ ಸಂಕಷ್ಟ ತಂದಿರುವ ಕೊರೊನಾವನ್ನೇ ಮುಖ್ಯ ವಿಷಯವಾಗಿಟ್ಟುಕೊಂಡಂತಹ ತುಳು ಸಿನಿಮಾ ಜೀಟಿಗೆಯ ಮುಹೂರ್ತ ಪೂಜೆಯು ಮಂಗಳೂರಿನ ಪದವಿನಂಗಡಿಯ ಕೊರಗಜ್ಜನ ಗುಡಿಯಲ್ಲಿ ನಡೆಯಿತು.
ಕೊರೊನಾ ಕಾರಣದಿಂದಾಗಿ ಬಹಳ ಸರಳವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಸುರತ್ಕಲ್ ಶಾಸಕ ಡಾಕ್ಟರ್ ಭರತ್ ಶೆಟ್ಟಿ ಕ್ಯಾಮೆರಾ ಸ್ವಿಚ್ ಆನ್ ಮಾಡಿ, ಜೀಟಿಗೆ ಉರಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಉದ್ಘಾಟಿಸಿದರು.
ಪ್ರಧಾನ ನಟರಾದ ನವೀನ್ ಡಿ ಪಡೀಲ್, ರಾಜ್ ಬಿ ಶೆಟ್ಟಿ, ರೂಪ ವೊರ್ಕಾಡಿ, ಪ್ರಕಾಶ್ ತೂಮಿನಾಡು, ಶೋಭರಾಜ್ ಕಾವೂರ್, ಜೆಪಿ ತೂಮಿನಾಡು, ಸುರೇಶ ಮಂಜೇಶ್ವರ, ಕ್ಯಾಮೆರಾ ಮ್ಯಾನ್ ವಿಷ್ಣು ಪ್ರಸಾದ್, ಪತ್ರಕರ್ತ ಪ್ರಕಾಶ್ ಪಾಂಡೇಶ್ವರ, ಸಾಹಿತಿ ಶಶಿರಾಜ್ ಕಾವೂರ್, ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಶ್ವನಾಥ್ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹ ಬೌಧ್ಧಿಕ್ ಪ್ರಮುಖ್ ವಿಶ್ವನಾಥ ಮಾಸ್ಟು ಕೋಳ್ಯೂರು.ಧರ್ಮ ಜಾಗರಣ ವಿಭಾಗ ಸಂಯೋಜಕ ತಿಮ್ಮಪ್ಪ ಮೀಯಪದವು. ಎಆರ್ ಪ್ರೊಡಕ್ಷನ್ ಮಾಲಕ ಜೀಟಿಗೆ ನಿರ್ಮಾಪಕ ಅರುಣ್ ರೈ, ಜೀಟಿಗೆ ನಿರ್ದೇಶಕ ಸಂತೋಷ್ ಮಾಡ, ಭಾಜಪ ಕೇರಳ ಸ್ಟೇಟ್ ಕಮಿಟಿ ಮೆಂಬರ್ ಹರೀಶ್ಚಂದ್ರ ಮಂಜೇಶ್ವರ, ಉಳ್ಳಾಲ ಕಾಂಗ್ರೆಸ್ ಪಕ್ಷದ ನೇತಾರ ಮೋಹನ್ ಮೆಂಡನ್, ಮಂಗಳೂರಿನ ಉದ್ಯಮಿ ಗಣೇಶ್ ಶೆಟ್ಟಿ, ಸುರೇಶ್ ಮಂಜೇಶ್ವರ, ಸಂಗೀತ ನಿರ್ದೇಶಕ ಸ್ಯಾಕ್ಸಾಫೋನ್ ಜಯರಾಮ್, ಗಿರ್ಗಿಟ್ ಸಿನಿಮಾ ನಿರ್ದೇಶಕ ರಾಕೇಶ್ ಕದ್ರಿ, ಪದವಿನಂಗಡಿ ಕಾರ್ಪರೇಟೆರ್ ಸಂಗೀತ ರ್ ನಾಯಕ್, ಸಮಾಜ ಸೇವಕ ಎಕ್ಕೋರು ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.