ಬೆಂಗಳೂರು, ಸೆ. 30 (DaijiworldNews/MB) : ಹತ್ರಸ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ದೇಶದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಬಗ್ಗೆ ಟ್ವೀಟ್ ಮಾಡಿ ಖಂಡನೆ ವ್ಯಕ್ತಪಡಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಪರಾಧಿಗಳನ್ನು ಗಲ್ಲಿಗೇರಿಸಿ ಎಂದು ಹೇಳಿದ್ದಾರೆ. ಅಕ್ಷಯ್ ಟ್ವೀಟ್ಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ದಿವ್ಯ ಸ್ಪಂದನಾ ತಿರುಗೇಟು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಕಾಲೆಳೆದಿದ್ದಾರೆ.
ಹತ್ರಸ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಟ್ವೀಟ್ ಮಾಡಿದ ನಟ ಅಕ್ಷಯ್ ಕುಮಾರ್ ಅವರು, ಈ ಪ್ರಕರಣದಿಂದಾಗಿ ಕೋಪ ಮತ್ತು ನಿರಾಶೆ ಉಂಟಾಗುತ್ತದೆ. ಹತ್ರಸ್ ಗ್ಯಾಂಗ್ರೇಪ್ನಲ್ಲಿ ಇಂತಹ ಕ್ರೂರತೆ. ಇದು ಯಾವಾಗ ನಿಲ್ಲುತ್ತದೆ? ನಮ್ಮ ಕಾನೂನುಗಳು ಮತ್ತು ಅವುಗಳ ಜಾರಿಗೊಳಿಸುವಿಕೆಯು ಎಷ್ಟು ಕಟ್ಟುನಿಟ್ಟಾಗಿರಬೇಕು ಎಂದರೆ ಶಿಕ್ಷೆಯನ್ನು ಕೇವಲ ಆಲೋಚನೆಯೇ ಅತ್ಯಾಚಾರಿಗಳನ್ನು ಭಯದಿಂದ ನಡುಗಿಸುಬೇಕು. ಅಪರಾಧಿಗಳನ್ನು ಗಲ್ಲಿಗೇರಿಸಿ. ಹೆಣ್ಣುಮಕ್ಕಳನ್ನು ಮತ್ತು ಸಹೋದರಿಯರನ್ನು ರಕ್ಷಿಸಲು ನಿಮ್ಮ ಧ್ವನಿಯನ್ನು ಹೆಚ್ಚಿಸಿ ನಮ್ಮಿಂದ ಕನಿಷ್ಟ ಇಷ್ಟನ್ನು ಮಾಡಲು ಸಾಧ್ಯ ಎಂದು ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿ ಪ್ರಧಾನಿಯನ್ನು ಕುಟುಕಿದ ನಟಿ ರಮ್ಯಾ, ನೀವು ನಿರಾಶೆಗೊಳ್ಳುವುದನ್ನು ಮುಂದುವರಿಯುತ್ತದೆ. ಇದು ಕೊನೆಯದಾಗಿರುವುದಿಲ್ಲ. ಏಕೆ ಎಂದು ನಿಮಗೆ ತಿಳಿದಿದೆಯೇ? ಇದು ಕಾನೂನಿಗೆ ಸಂಬಂಧಿಸಿದಲ್ಲ, ದ್ವೇಷಪೂರಿತ ಮನಸ್ಥಿತಿಗೆ ಸಂಬಂಧಿಸಿದ್ದು. ಈ ಮನಸ್ಥಿತಿಗೆ ಯಾರು ಪೋಷಣೆ ಮಾಡುತ್ತಾರೆ? ಪ್ರಧಾನಿ ಮೋದಿಯವರು ಪ್ರತಿದಿನ ಮಹಿಳೆಯರಿಗೆ ಅತ್ಯಾಚಾರ ಮಾಡುವವರನ್ನು ಫಾಲೋ ಮಾಡುತ್ತಾರೆ. ಬದಲಾವಣೆ ಮೇಲ್ಭಾಗದಲ್ಲಿ ಪ್ರಾರಂಭವಾಗುತ್ತದೆ ಎಂದು ನೀವು ಯೋಚಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.