ಹೊಸದಿಲ್ಲಿ,ಸೆ 28 (DaijiworldNews/HR): ನಟಿ ದೀಪಿಕಾ ಪಡುಕೋಣೆಯ ತಿರುಚಲ್ಪಟ್ಟ ಚಿತ್ರವನ್ನು ತಮ್ಮ ಹೆಸರಿನಲ್ಲಿ ಸೃಷ್ಟಿಸಲಾಗಿರುವ ನಕಲಿ ಟ್ವಿಟರ್ ಖಾತೆಯಲ್ಲಿ ರಿಟ್ವೀಟ್ ಮಾಡಿದ ಕಾರ್ಮಿಕ ಸಚಿವಾಲಯದ ವಿರುದ್ಧ ಗಾಯಕ ಸೋನು ನಿಗಮ್ ಕಿಡಿ ಕಾರಿದ್ದಾರೆ.
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಮಾಡಿ ಸೋನು ನಿಗಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತದಲ್ಲಿ ಮಾನಸಿಕ ಸಮಸ್ಯೆ ಇದೆ, ಇಲ್ಲಿ ಸೈಬರ್ ಸುರಕ್ಷತೆ ಎಂಬುದು ಇಲ್ಲವೇ ಇಲ್ಲ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಅದರ ಜತೆಗೆ ಅವರು #ಸೋನುಲೈವ್ಡಿ ವ್ಲಾಗ್ 76 ಮಿನಿಸ್ಟ್ರಿ ಆಫ್ ಲೇಬರ್ ಆಫ್ ಇಂಡಿಯಾ, ಐ ಆಮ್ ನಾಟ್ ಆನ್ ಟ್ವಿಟರ್,'' ಎಂದೂ ಕೂಡ ಬರೆದಿದ್ದಾರೆ.
ಕಾರ್ಮಿಕ ಸಚಿವಾಲಯ ರಿಟ್ವೀಟ್ ಮಾಡಿರುವುದನ್ನು ಡಿಲೀಟ್ ಮಾಡಿದ್ದರೂ ಕೂಡ ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಿದೆ ಎಂದು ಹೇಳಿದ್ದಾರೆ
ಮೂರುವರೆ ವರ್ಷಗಳೀಂದ ನಾನು ಟ್ವೀಟರ್ ಉಪಯೋಗಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಸೋನು ನಿಗಮ್ ತಮ್ಮ ಹೆಸರಿನ ನಕಲಿ ಖಾತೆಗಳ ಕುರಿತಂತೆ ಈ ಹಿಂದೆಯೇ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾಗಿಯೂ ಹೇಳಿದ್ದಾರೆ.