ಬೆಂಗಳೂರು, ಸೆ. 24(DaijiworldNews/HR): ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ರಾಕಿಂಗ್ ಸ್ಟಾರ್ ಯಶ್ ಭಾರೀ ವರ್ಕೌಟ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
ಇದೀಗ ಯಶ್ ದಿನನಿತ್ಯದ ವರ್ಕೌಟ್ ನ ಸಮಯವನ್ನು ಹೆಚ್ಚು ಮಾಡಿಕೊಂಡಿದ್ದು ವಿವಿಧ ವ್ಯಾಯಾಮ, ಕುಸ್ತಿಗಳಿಗಾಗಿ ಬೇರೆ ಬೇರೆ ಸಮಯಗಳಲ್ಲಿ ಮಾಡುತ್ತಿದ್ದಾರಂತೆ.
ಇನ್ನು ಬೆಳಗ್ಗೆ 6 ಗಂಟೆಯಿಂದ ಅರ್ಧ ಗಂಟೆ ಕಾಲ ಕಾರ್ಡಿಯೊ ಮಾಡಿ ಬಳಿಕ ತೂಕಕ್ಕೆ ಸಂಬಂಧಿಸಿದ ತರಬೇತಿ, ಆಬ್ ವರ್ಕೌಟ್ ಒಂದು ಗಂಟೆ ಮತ್ತೆ ಕಾರ್ಡಿಯೊ ಸೆಷನ್ ನಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಭಾರೀ ದೈಹಿಕ ಕಸರತ್ತು ಮತ್ತು ಕಟ್ಟುನಿಟ್ಟಿನ ಡಯಟ್ ಕೂಡ ಪಾಲಿಸುತ್ತಾರಂತೆ ಯಶ್.
ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಅಧೀರ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಹಾಗೂ ಬಾಲಿವುಡ್ ನಟಿ ರವೀನಾ ಟಂಡನ್ ಅಭಿನಯಿಸುತ್ತಿದ್ದಾರೆ.