ಬೆಂಗಳೂರು, ಸೆ. 22(DaijiworldNews/HR): ನಟಿ ರಶ್ಮಿಕಾ ಮಂದಣ್ಣ ಟ್ವಿಟರ್, ಇನ್ಸ್ಟಾಗ್ರಾಮ್ ಲೈವ್ನಲ್ಲಿ ಅಭಿಮಾನಿಗಳು ಕೇಳುವ ಪ್ರಶ್ನೆಗೆ ಮುಕ್ತವಾಗಿಯೇ ಉತ್ತರಿಸುತ್ತಾರೆ. ಅಂತೆಯೇ ನಿನ್ನೆ ರಶ್ಮಿಕಾ ಟ್ವೀಟರ್ನಲ್ಲಿ ಮತ್ತೆ ಅಭಿಮಾನಿಗಳ ಜೊತೆಗೆ ಮುಖಾಮುಖಿಯಾಗಿದ್ದು,ಅವರ ಪ್ರಶ್ನೆಗಳಿಗೆ ಮುಕ್ತವಾಗಿಯೇ ಉತ್ತರ ನೀಡಿದ್ದಾರೆ.
ಅಭಿಮಾನಿಯೊಬ್ಬರ ನೀವು ಹೋಟೆಲ್ನಲ್ಲಿ ಯಾವ ವಸ್ತು ಕದ್ದಿದ್ದೀರಿ’ ಎಂಬ ಪ್ರಶ್ನೆಗೆ, ‘ಹೋಟೆಲ್ನಲ್ಲಿ ನನಗೆ ಶಾಂಪು ಇಷ್ಟವಾದರೆ ಅದನ್ನು ಕದಿಯದೇ ಬಿಡುವುದಿಲ್ಲ. ಒಮ್ಮೆ ನಾನು ಪಿಲ್ಲೊ ಕವರ್ ಕದ್ದಿದೆ. ಇಂದಿಗೂ ನನಗೆ ಆ ಅಪರಾಧಿ ಪ್ರಜ್ಞೆ ಕಾಡುತ್ತಿದೆ’ ಎಂಬುದಾಗಿ ಉತ್ತರಿಸಿದ್ದಾರೆ.
ಇನ್ನು ರಶ್ಮಿಕಾ ಅವರಿಗೆ ವೈಯಕ್ತಿಕ ಜೀವನ ಮತ್ತು ವೃತ್ತಿಬದುಕಿನಲ್ಲಿ ಉನ್ನತ ಹಂತಕ್ಕೆ ತಲುಪುವ ಆಸೆ ಅವರಿಗೆ ಇದೆಯಂತೆ. ‘ನನಗೆ ಯಾವುದೇ ಮಿತಿಗಳಿಲ್ಲ. ಬಾಲಿವುಡ್ ಮತ್ತು ಹಾಲಿವುಡ್ನಲ್ಲೂ ಕೆಲಸ ಮಾಡಬೇಕೆಂಬ ಆಸೆ ಇದೆ. ಆ ಆಸೆ ಈಡೇರುತ್ತದೆಯೇ ಎಂಬ ಕಾತರದಲ್ಲಿದ್ದೇನೆ ಎಂದಿದ್ದಾರೆ.
ಇನ್ನು ರಶ್ಮಿಕಾ ಪ್ರತಿದಿನವೂ ಐಪಿಎಲ್ ವೀಕ್ಷಣೆ ಮಾಡುತ್ತಾರಂತೆ. ಆದರೆ, ಅವರು ಯಾವುದೇ ಕ್ರಿಕೆಟ್ ತಂಡಕ್ಕೂ ಬೆಂಬಲ ನೀಡಲು ಸಿದ್ಧವಿಲ್ಲ. ‘ಈ ಸೀಸನ್ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ನನಗೆ ಊಹೆ ಮಾಡಲು ಬರುವುದಿಲ್ಲ. ಆದರೆ, ಎಲ್ಲಾ ತಂಡಗಳಿಗೂ ಶುಭಾಶಯ ಕೋರುತ್ತೇನೆ’ ಎಂದಿದ್ದಾರೆ.