ಮುಂಬೈ, ಸೆ.21 (DaijiworldNews/HR): ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಕಂಗನಾ ಕಚೇರಿಯನ್ನು ಭಾಗಶಃ ಧ್ವಂಸ ಮಾಡಿದ್ದು, ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಕಂಗನಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.
ಈ ಬಗ್ಗೆ ಇತ್ತೀಚೆಗೆ ನಟಿ ಕಂಗನಾ ಸಂದರ್ಶನವೊಂದರಲ್ಲಿ ಬಾಲಿವುಡ್ನಲ್ಲಿ ಕಾಸ್ಟಿಂಗ್ ಕೌಚ್ ಮತ್ತು ಮಹಿಳೆಯರ ಮೇಲಿನ ಒತ್ತಡದ ಬಗ್ಗೆ ಮಾತನಾಡಿದ್ದಾರೆ. “ನಟಿಯಾದವರು ಸಿನಿಮಾದಲ್ಲಿ ಯಶಸ್ವಿಯಾಗಬೇಕೆಂದರೆ ಅಥವಾ ಗುರುತಿಸಿಕೊಳ್ಳಬೇಕು ಎಂದು ಬಯಸಿದರೆ ನಟ ಅಥವಾ ನಿರ್ದೇಶಕರನ್ನು ಸಂತೋಷಪಡಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಅನೇಕ ನಟರು, ಸೂಪರ್ಸ್ಟಾರ್ಗಳು, ಎ ಲಿಸ್ಟ್ ನಟರು, ಬಿಗ್ ಸೂಪರ್ಸ್ಟಾರ್ಗಳು ಮತ್ತು ನಿರ್ದೇಶಕರು ಚಿತ್ರದ ಸೆಟ್ಗಳಲ್ಲಿ ನಟಿಯರನ್ನು ಹೆಂಡತಿಯಂತೆ ನೋಡಲು ಬಯಸುತ್ತಾರೆ. ಆದ್ದರಿಂದ ನಾವು ಅವರ ಪತ್ನಿಯರಂತೆ ಸೆಟ್ನಲ್ಲಿ ವರ್ತಿಸಬೇಕು. ಆಗ ಮುಂದಿನ ಸಿನಿಮಾದಲ್ಲಿ ಅವಕಾಶ ಸಿಗುತ್ತದೆ ಎಂಬುದಾಗಿ ಹೇಳಿದ್ದಾರೆ.