ನವದೆಹಲಿ, ಸೆ. 11 (DaijiworldNews/MB) : ನಾನು ಪ್ರತಿದಿನ ಗೋ ಮೂತ್ರವನ್ನು ಸೇವಿಸುತ್ತೇನೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ.
ಇನ್ಸ್ಟಾಗ್ರಾಂ ಲೈವ್ ಚಾಟಿಂಗ್ನಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿರುವ ಅವರಲ್ಲಿ ಅರಣ್ಯ ಸಾಹಸ ಕುರಿತ ಡಾಕ್ಯುಮೆಂಟರಿ ಕಾರ್ಯಕ್ರಮದಲ್ಲಿ ಬೇರ್ ಗ್ರಿಲ್ಸ್ ಜೊತೆ ಆನೆ ಲದ್ದಿಯ ಟೀ ಕುಡಿದ ಬಗ್ಗೆ ನಟಿ ಹುಮಾ ಖುರೇಷಿ ಕೇಳಿದ್ದು ಆ ಸಂದರ್ಭದಲ್ಲಿ ''ನನಗೇನು ಅನಿಸಲ್ಲ, ನಾನು ಪ್ರತಿದಿನ ಗೋ ಮೂತ್ರವನ್ನು ಆರೋಗ್ಯದ ದೃಷ್ಟಿಯಿಂದ ಸೇವಿಸುತ್ತೇನೆ. ಇದರಲ್ಲಿ ವಿಶೇಷ ಏನು ಇಲ್ಲ'' ಎಂದು ಹೇಳಿದ್ದಾರೆ.
ನಟ ಅಕ್ಷಯ್ ಕುಮಾರ್ ಅವರು ಇಂಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಡಾಕ್ಯುಮೆಂಟರಿ ಕಾರ್ಯಕ್ರಮದಲ್ಲಿ ಬ್ರಿಟನ್ ಸಾಹಸಿಗ ಬೇರ್ ಗ್ರಿಲ್ಸ್ ಜೊತೆ ಕರ್ನಾಟಕದ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಚಾರಣ ಮಾಡಿದ್ದು ಅದು ಶುಕ್ರವಾರ ಡಿಸ್ಕವರಿ+ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಬೇರ್ ಗ್ರಿಲ್ಸ್ ಅವರು, ''ನಟ ಅಕ್ಷಯ್ ಅವರೊಂದಿಗೆ ಕೆಲಸ ಮಾಡಿದ್ದು ತುಂಬಾ ಸಂತೋಷವಾಗಿದೆ. ಅವರೊಂದಿಗೆ ಇನ್ನು ಹಲವು ಭಾರೀ ಕಾರ್ಯ ನಿರ್ವಹಿಸುವ ಇಚ್ಛೆಯಿದೆ. ಅವರು ಬಹಳ ಉತ್ತಮವಾಗಿ ಫಿಟ್ನೆಟ್ ಕಾಪಾಡಿಕೊಂಡಿದ್ದಾರೆ'' ಎಂದು ಕೂಡಾ ಹೇಳಿದ್ದಾರೆ.