ಹೊಸದಿಲ್ಲಿ, ಸೆ 6(DaijiworldNews/HR): ಬಾಲಿವುಡ್ ನಟ ಅರ್ಜುನ ಕಪೂರ್ ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಇನ್ಸ್ಟಾಗ್ರಾಮ್ನ ಮೂಲಕ ಅರ್ಜುನ್ ತನ್ನ ಅಭಿಮಾನಿಗಳಿಗೆ ಈ ಮಾಹಿತಿ ನೀಡಿದ್ದಾರೆ.
ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಬಂದಿದೆ ಎಂದು ನಿಮಗೆಲ್ಲರಿರೂ ತಿಳಿಸುವುದು ನನ್ನ ಕರ್ತವ್ಯ. ನಾನೀಗ ಆರೋಗ್ಯವಾಗಿದ್ದು, ನನ್ನಲ್ಲಿ ಕೊರೊನದ ಯಾವುದೇ ಗುಣಲಕ್ಷಣ ಇರಲಿಲ್ಲ. ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿ ಪ್ರತ್ಯೇಕವಾಗಿದ್ದೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
2019ರಲ್ಲಿ ಅರ್ಜುನ್ ಕಪೂರ್ ಐತಿಹಾಸಿಕ ಡ್ರಾಮಾ ಪಾನಿಪತ್ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು.