ಬೆಂಗಳೂರು, ಸೆ. 02 (DaijiworldNews/MB) : ''ಐ ಆ್ಯಮ್ ಸಿಂಗಲ್, ನನಗೆ ಹೀಗಿರುವುದೇ ಇಷ್ಟ'' ಎಂದು ರಶ್ಮಿಕಾ ಮಂದಣ್ಣ ತನ್ನ ಅಭಿಮಾನಿಗಳಿಗೆ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗದಲ್ಲಿ ಸಂವಾದದ ವೇಳೆ ಅಭಿಮಾನಿಗಳು ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, ''ಐ ಆ್ಯಮ್ ಸಿಂಗಲ್, ಹೀಗಿರುವುದೇ ಇಷ್ಟ. ಯಾರೆಲ್ಲಾ ನಟರೊಂದಿಗೆ ನನ್ನ ಹೆಸರನ್ನು ಸೇರಿಸಲಾಗುತ್ತಿದೆ ಎಂದು ನನಗೆ ತಿಳಿದಿದೆ. ನಾನು ಸಿಂಗಲ್ ಆಗಿಯೇ ಇದ್ದೇನೆ. ಇದನ್ನು ನೀವು ನಂಬಲೇ ಬೇಕು'' ಎಂದು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ನಟಿ ತಾನು ಬಾಲಿವುಡ್ ನಟಿ ಶ್ರೀದೇವಿ ಅವರ ಬಯೋಪಿಕ್ನಲ್ಲಿ ನಟಿಸುವ ಬಯಕೆಯನ್ನು ತಿಳಿಸಿದ್ದು ತನ್ನ ಇಷ್ಟದ ಖಾದ್ಯಗಳ ಬಗ್ಗೆ ಹೇಳಿದ್ದಾರೆ. ''ನನಗೆ ಗುಲಾಬ್ ಜಾಮೂನ್ ಇಷ್ಟ. ಆದರೆ ಅದರಲ್ಲಿ ಸಕ್ಕರೆ ಹೆಚ್ಚಿರುವ ಕಾರಣ ಅದು ನನ್ನ ಆರೋಗ್ಯಕ್ಕೆ ಸರಿಯಾಗಲ್ಲ. ಆದರೂ ನನಗೆ ಗುಲಾಬ್ ಜಮೂನ್ ಇಷ್ಟ'' ಎಂದು ಹೇಳಿದ್ದಾರೆ.
ಕಿರಿಕ್ ಪಾರ್ಟಿ ಸಾನ್ವಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರ ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಬಿದ್ದ ಬಳಿಕ ಹೊಸ ಪ್ರೀತಿ, ಮದುವೆ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನಿಸುತ್ತಲ್ಲೇ ಇದ್ದಾರೆ. ಸುಕುಮಾರ್ ನಿರ್ದೇಶನದ ''ಪುಷ್ಪ'' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಆಕೆ ಧ್ರುವ ಸರ್ಜಾ ಜೊತೆಗೆ ನಟಿಸಿರುವ ''ಪೊಗರು'' ಸಿನಿಮಾವೂ ಬಿಡುಗಡೆಗೆ ಸಿದ್ಧವಾಗಿದೆ.