ಬೆಂಗಳೂರು, ಸೆ.1(DaijiworldNews/HR):ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಗೆ ಕಳೆದ ವರ್ಷ ಗಂಡು ಮಗು ಜನಿಸಿದ್ದು ಅವರ ಪುತ್ರನಿಗೆ 10 ತಿಂಗಳು. ಇದೀಗ ಮಗನಿಗೆ ಈ ದಂಪತಿ ನಾಮಕರಣ ಕಾರ್ಯಕ್ರಮ ನೆರವೇರಿಸಿದ್ದು, ‘ಯಥರ್ವ್ ಯಶ್’ ಎಂದು ಹೆಸರಿಟ್ಟಿದ್ದಾರೆ.
ಇನ್ನು ಅಭಿಮಾನಿಗಳು ಯಶ್ ದಂಪತಿ ಪುತ್ರನಿಗೆ ಯಾವಾಗ ಹೆಸರಿಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದರು. ಈ ಹಿಂದೆ ‘ಆಯುಷ್’ ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಕೊನೆಗೆ, ರಾಧಿಕಾ ಪಂಡಿತ್ ಅವರೇ ಇದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದರು.
ಇದೀಗ ಪುತ್ರನ ಹೆಸರನ್ನು ಘೋಷಿಸಿರುವುದು ಅಭಿಮಾನಿಗಳಿಗೆ ಖುಷಿ ತಂದಿದ್ದು,ಯಥರ್ವ್ ಎಂದರೆ ಪರಿಪೂರ್ಣ ಎಂದರ್ಥ ಎಂಬುದಾಗಿದೆ.
ಸರಳವಾಗಿ ಶಾಸ್ತ್ರೋಕ್ತವಾಗಿಯೇ ನಾಮಕರಣ ನಡೆದಿದ್ದು, ಕುಟುಂಬದ ಸದಸ್ಯರಷ್ಟೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ನಾಮಕರಣ ಕಾರ್ಯಕ್ರಮದ ವಿಡಿಯೊ ಮಾಡಿರುವ ಯಶ್ ದಂಪತಿ ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ.