ಮುಂಬೈ, ಆ. 25 (DaijiworldNews/MB) : ಇತ್ತೇಚೆಗೆ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟ ಸೈಫ್ ಅಲಿ ಖಾನ್ ತನ್ನ ಜೀವನಕಥೆಯನ್ನು ಪುಸ್ತಕವನ್ನು ಬರೆಯಲಾಗುವುದು ಎಂದು ಹೇಳಿದ್ದು ಇದೀಗ ಟ್ರೋಲ್ಗ ಒಳಗಾಗಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ಒಬ್ಬರು ನಿರಂತರ ಫ್ಲಾಫ್ ಚಿತ್ರಗಳನ್ನೇ ಮಾಡಿ, ಪದ್ಮಶ್ರೀ ಪಡೆದು, ಎಂದಿಗೂ ಯಶಸ್ವಿ ಕಾಣದೆಯೇ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳುತ್ತಿರುವುದಾಗಿಯೂ ನಿಮ್ಮ ಬಯೋಗ್ರಫಿಯಲ್ಲಿ ಬರೆದುಕೊಳ್ಳಿ ಎಂದು ಹೇಳಿದ್ದಾರೆ.
ಇನ್ನೋರ್ವ ಸಾಲು ಸಾಲಾಗಿ ಫ್ಲಾಫ್ ಸಿನಿಮಾಗಳನ್ನು ನೀಡಿದ ನಂತರವೂ, ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಹೇಗೆ ಗಿಟ್ಟಿಸಿಕೊಂಡಿದ್ದೀರಿ? ಅದನ್ನು ಕೂಡಾ ಸ್ವಲ್ಪ ನಿಮ್ಮ ಬಯೋಗ್ರಫಿಯಲ್ಲಿ ವಿವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಕಾಮೆಂಟ್ ಮಾಡಿರುವ ಮತ್ತೋರ್ವ, ಏನು ಲೆಜೆಂಡರಿ ಕ್ರಿಕೆಟರ್ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ನಟಿ ಶರ್ಮಿಳಾ ಟ್ಯಾಗೂರ್ ಪುತ್ರ ಸೈಫ್ ಅಲಿಖಾನ್ ತನ್ನ ಸಿನಿಮಾ ಜೀವನದ ಹೋರಾಟದ ಬಗ್ಗೆ ಜೀವನ ಚರಿತ್ರೆ ಬರೆಯಲಿದ್ದಾರೆಯೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.