ಮುಂಬೈ, ಆ. 23(DaijiworldNews/HR): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಾರ್ಥನಾ ಸಭೆಯಲ್ಲಿ 101 ಕ್ಕೂ ಹೆಚ್ಚು ದೇಶಗಳ ಜನರು ಭಾಗವಹಿಸಿದ್ದು, ಅವರ ಅಭಿಮಾನಿಗಳ ಮತ್ತು ಹಿತೈಶಿಗಳ ಬೆಂಬಲಕ್ಕೆ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸುಶಾಂತ್ ಗಾಗಿ ನಡೆಸಿದ ಜಾಗತಿಕ ಪ್ರಾರ್ಥನಾ ಸಭೆಯಲ್ಲಿ ಗಾಯತ್ರಿ ಮಂತ್ರ ಪಠಿಸುವಾಗ 101 ಕ್ಕೂ ಹೆಚ್ಚು ದೇಶಗಳ ಜನರು ಸೇರಿಕೊಂಡರು ಎಂಬುದನ್ನು ಹೇಳಲು ಖುಷಿಯಾಗುತ್ತದೆ ಎಂದರು.
ಈ ಘಟನೆಯಿಂದ ನನಗೆ ತುಂಬಾ ಖುಷಿಯಾಗಿದೆ ಮತ್ತು ಸಕಾರಾತ್ಮಕ ಭಾವನೆ ನಮ್ಮೆಲ್ಲರನ್ನೂ ಸುತ್ತುವರೆದಿದೆ. ಹಾಗೇ ಈ ಕಾರ್ಯಕ್ರಮವನ್ನು ಮಾಡಲು ಸಹಕರಿಸಿದ ಎಲ್ಲರಿಗೂ ಮತ್ತು ಅವರ ಕುಟುಂಬಕ್ಕೆ ಧನ್ಯವಾದಗಳು ಎಂದರು.
ಇನ್ನು ಮುಸ್ಲಿಂ, ಹಿಂದೂ ಅಥವಾ ಕ್ರಿಶ್ಚಿಯನ್ ಎನ್ನದೇ 101 ಕ್ಕೂ ಹೆಚ್ಚು ದೇಶಗಳ ಜನರು ಸೇರಿಕೊಂಡು ಸುಶಾಂತ್ ಗಾಗಿ ಗಾಯತ್ರಿ ಮಂತ್ರವನ್ನು ಜಪಿಸುತ್ತಿದ್ದರು. ಸತ್ಯ ಮತ್ತು ನ್ಯಾಯದ ಹೋರಾಟಕ್ಕಾಗಿ ದೇವರು ಯಾವಾಗಲೂ ನಮ್ಮೊಂದಿಗಿರುತ್ತಾನೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಈ ವಿಡಿಯೋವನ್ನು ಶ್ವೇತಾ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗಣೇಶ ಚತುರ್ಥಿಯ ದಿನದಂದೂ ಕೂಡ ಶ್ವೇತಾ ಸುಶಾಂತ್ ಗಣೇಶನ ವಿಗ್ರಹದ ಜೊತೆಗೆ ಪೋಸ್ ನೀಡುವ ಪೋಟೊವನ್ನು ಪೋಸ್ಟ್ ಮಾಡಿದ್ದರು.
ಜೂನ್ 14 ರಂದು ಸುಶಾಂತ್ ಸಿಂಗ್ ಮುಂಬೈನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದೀಗ ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.