ಹೈದರಾಬಾದ್, ಆ. 20(DaijiworldNews/HR): ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಬೆಂಗಳೂರಿನ ಉದ್ಯಮಿ, ಕೋಟ್ಯಾಧೀಶ ಗೌತಮ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸದ್ಯ ಸಿನಿರಂಗದಲ್ಲಿ ಹರಿದಾಡುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲಿ ಸಿನಿಮಾ ತಾರೆಗಳು ಒಬ್ಬೊಬ್ಬರಾಗಿ ಮದುವೆ ಮಾಡಿಕೊಳ್ಳುತ್ತಿದ್ದು, ಇದೀಗ ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ನಿಶ್ಚಿತಾರ್ಥದ ಸುದ್ದಿ ಎಲ್ಲೆಡೆ ಹಬ್ಬಿದೆ.
ಇನ್ನು ಕಾಜಲ್ ಅಗರ್ವಾಲ್ ನಿಶ್ಚಿತಾರ್ಥಕ್ಕೆ ಅವರ ಸ್ನೇಹಿತ, ನಟ ಬಲ್ಲಂಕೊಂಡ ಸಾಯಿ ಶ್ರೀನಿವಾಸ್ ಸಾಕ್ಷಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ನಿಶ್ಚಿತಾರ್ಥದ ಯಾವುದೇ ಪೊಟೋಗಳು ಕಂಡುಬಂದಿಲ್ಲ. ಲಾಕ್ ಡೌನ್ ಮುಗಿದ ನಂತರ ಮಗಧೀರ ಖ್ಯಾತಿಯ ನಟಿ ಕಾಜಲ್ ಅಗರ್ವಾಲ್ ವಿವಾಹವಾಗಲಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಹಲವು ಬಾರಿ ಕಾಜಲ್ ಅಗರ್ವಾಲ್ ಅವರ ವಿವಾಹಕ್ಕೆ ಸಂಬಂಧಿಸಿದ ಸುದ್ದಿ ಹರಿದಾಡುತ್ತಿತ್ತು. ಇತ್ತ ನಟಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸಮಯದಿಂದ ಯಾವುದೇ ಪೋಸ್ಟ್ ಅಪ್ಲೊಡ್ ಮಾಡದಿರುವುದನ್ನು ಗಮನಿಸಿದ್ದ ಅಭಿಮಾನಿಗಳು ಮದುವೆಯಾಗಿರುವ ಅನುಮಾನ ವ್ಯಕ್ತಪಡಿಸಿದ್ದರು.