ಮುಂಬೈ, ಆ 16 (DaijiworldNews/PY): ತುಳುನಾಡಿನ ಪ್ರತೀ ಮನೆಯಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುವ ಖಾದ್ಯ ಪತ್ರೊಡೆಗೆ ಬಾಲಿವುಡ್ ನಟಿ ಕಂಗನಾ ರನಾವತ್ ಅವರು ಫಿದಾ ಆಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ತಾಯಿ ನನಗೆ ಇಷ್ಟವಾದ ಪತ್ರೊಡೆ ಹಾಗೂ ಲಸ್ಸಿ ಮಾಡಿಕೊಟ್ಟರು. ಕೆಸುವಿನ ಎಲೆ ಹಾಗೂ ತುಳಸಿ ಎಲೆಯನ್ನು ಬಳಸಿ ಹಬೆಯಲ್ಲಿ ಬೇಯಿಸಿ, ತುಪ್ಪದಲ್ಲಿ ಹುರಿದು ಮಾಡಲಾದ ಪತ್ರೊಡೆ ತುಂಬಾ ರುಚಿಕರವಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಕಂಗನಾರ ಈ ಟ್ವೀಟ್ಗೆ ಹಲವಾರು ಮಂದಿ ಪ್ರತಿಕ್ರಿಯಿಸಿದ್ದು ಪತ್ರೊಡೆಯ ವಿಶೇಷತೆಯ ವಿಚಾರವಾಗಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಕೆಸುವಿನ ಎಲೆಯಿಂದ ತಯಾರಿಸುವ ಕರಾವಳಿಯ ವಿಶಿಷ್ಟ ಖಾದ್ಯ ಬಹಳ ಜನಪ್ರಿಯವಾಗಿದೆ. ಆಟಿ ತಿಂಗಳಿನಲ್ಲಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ.