ಮುಂಬೈ, ಆ 15(DaijiworldNews/HR): ಎರಡು ರಾಷ್ಟ್ರೀಯ ಪಕ್ಷಗಳು ನನಗೆ ಚುನಾವಣಾ ಟಿಕೆಟ್ ನೀಡಲು ಮುಂದಾಗಿದ್ದವು. ಆದರೆ ನಾನು ಸ್ವೀಕರಿಸಲಿಲ್ಲ ಎಂದು ಬಾಲಿವುಡ್ ನ ನೇರ ನುಡಿಯ ನಟಿ ಕಂಗನಾ ರಣಾವುತ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಹಿಂದೆ ಬಿಜೆಪಿ ಮತ್ತುನ್ ಕಾಂಗ್ರೆಸ್ ಪಕ್ಷಗಳು ನನಗೆ ಟಿಕೆಟ್ ನೀಡಲು ಮುಂದಾಗಿತ್ತು. ಆದರೆ ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ ಜೊತೆಗೆ ಅದರ ಬಗ್ಗೆ ಆಲೋಚನೆಯೂ ಮಾಡಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ನನ್ನ ಅಜ್ಜ ಸತತ ಸತತ 15 ವರ್ಷಗಳ ಕಾಲ ಶಾಸಕರಾಗಿದ್ದರು. ನಾನು ಸಿನಿಮಾದಲ್ಲಿಯೇ ತುಂಬಾ ಬ್ಯುಸಿ ಯಾಗಿರುವ ಕಾರಣ ನನಗೆ ಯಾವುದೇ ರಾಜಕೀಯಕ್ಕೆ ಸೇರ್ಪಡೆಯಾಗುವ ಉದ್ದೇಶವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಇವತ್ತಿನ ಸ್ವಾತಂತ್ರೋತ್ಸವ ಭಾಷಣ ಇಷ್ಟ ಪಟ್ಟು ಕಂಗನಾ ಮಾಡಿದ ಟ್ವೀಟ್ ನೋಡಿ ಬಿಜೆಪಿ ಸೇರುತ್ತಾರೆ ಎಂಬ ನೆಟ್ಟಿಗರ ಊಹಾಪೋಹಗಳಿಗೆ ನಾನು ರಾಜಕೀಯ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.