ಬೆಂಗಳೂರು, ಆ. 12 (DaijiworldNews/MB) : ಸ್ಮಿತೇಶ್ ಎಸ್ ಬಾರ್ಯ ನಿರ್ದೇಶನದಲ್ಲಿ ಮೂಡಿಬರಲಿರುವ ಕರಾವಳಿ ಪ್ರತಿಭೆಗಳ ಬಹು ನಿರೀಕ್ಷೆಯ ಕನಸು ಮಾರಾಟಕ್ಕಿದೆ ಸಿನಿಮಾ ಈಗ ಡಬ್ಬಿಂಗ್ ಹಂತದಲ್ಲಿದೆ.
ತುಳುನಾಡಿನ ಹಸಿರ ಸಮೃದ್ದಿಯ ಗಿರಿಶಿಖರದ ನಡುವಲ್ಲಿ ಮಂಗಳೂರು ಕನ್ನಡದೊಂದಿಗೆ "ಯುವಜನತೆಗೆ ಸ್ಪೂರ್ತಿದಾಯವಾಗುವ ಕಾಮಿಡಿ ಥ್ರಿಲ್ಲರ್ " ಸಿನಿಮಾ ಮಾಡುತ್ತಿರುವ ಈ ತಂಡ ಏಪ್ರಿಲ್ 26 ಕ್ಕೆ ಈ ಸಿನಿಮಾದ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಸಾಧ್ಯವಾಗಿರಲಿಲ್ಲ.
ಈ ಸಿನಿಮಾಕ್ಕೆ ಚಿತ್ರಕಥೆ ಸಂಭಾಷಣೆಯನ್ನು ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ಬರೆದಿದ್ದಾರೆ. ನವೀನ್ ಪೂಜಾರಿ ಚಿತ್ರದ ಕಥೆ ಹೆಣೆದಿದ್ದಾರೆ. ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣ ಮಾಡಿದ್ದು ಖ್ಯಾತ ಹಿನ್ನೆಲೆ ಗಾಯಕಿ ಮಾನಸ ಹೊಳ್ಳ ಅವರ ಧ್ವನಿಯಲ್ಲಿ ಸಂಗೀತಗಳು ಮೂಡಿ ಬಂದಿದೆ. ಸಂಗೀತಕ್ಕೆ ಖ್ಯಾತ ಚಿತ್ರಸಾಹಿತಿ ಕವಿರಾಜ್, ಭರಾಟೆ ನಿರ್ದೇಶಕ ಚೇತನ್, ಗೀತ ರಚನೆಕಾರ ನಾಗೇಂದ್ರ ಪ್ರಸಾದ್, ಸುಕೇಶ್ ಅವರು ಸಾಹಿತ್ಯದ ಮೂಲಕ ಸಾಥ್ ನೀಡಿದ್ದಾರೆ.
ಇನ್ನು ಈ ಸಿನಿಮಾದ ನಾಯಕ, ನಾಯಕಿಯಾಗಿ ಪ್ರಜ್ಞೇಶ್, ಸ್ವಸ್ತಿಕ ನವ್ಯ ಪೂಜಾರಿ ಕನಸು ಮಾರಾಟ ಮಾಡಲು ಮುಂದಾಗಿದ್ದಾರೆ. ಹಾಗೆಯೇ ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಧೀರಜ್ ನೀರುಮಾರ್ಗ, ಚಿದಂಬರ, ಸೂರ್ಯ ಕುಂದಾಪುರ, ಚೇತನ್ ರೈ ಮಾಣಿ, ಮೋಹನ್ ಶೇಣಿ,ಹೀಗೆ ಹಲವಾರು ಕಲಾವಿದರು ಈ ಸಿನಿಮಾದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದ ಈಗ ಸಿನಿಮಾವು ಡಬ್ಬಿಂಗ್ ಹಂತದಲ್ಲಿದೆ. ಚಿತ್ರದ ಚಿತ್ರೀಕರಣ ಮಂಗಳೂರು, ಮಲ್ಪೆ, ಬೆಳ್ತಂಗಡಿ, ಮಿತ್ತಬಾಗಿಲು, ಮೂಡುಬಿದ್ರೆ, ಮಿತ್ತಬಾಗಿಲು ಮುಂತಾದೆಡೆ ನಡೆದಿದೆ.