ಬೆಂಗಳೂರು, ಆ. 07 (DaijiworldNews/HR): ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ನ ಸಾಮಾಜಿಕ ಮಾದ್ಯಮ ಮಾಜಿ ನಿರ್ವಾಹಕಿ ರಮ್ಯಾ ಆಗಸ್ಟ್ 5ರಂದು ನಡೆದ ಅಯೋಧ್ಯೆ ಭೂಮಿ ಪೂಜೆಯ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆಯುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗುತ್ತದೆ ಎಂದು ಎಲ್ಲಾ ಹಿಂದೂಗಳು ಸಂತೋಷದಿಂದಿದ್ದಾರೆ. ಅಂತೆಯೇ ನಾನು ಕೂಡ ಖುಷಿಯಾಗಿದ್ದೇನೆ.
ಇನ್ನೂ ಮಸೀದಿ ನಿರ್ಮಾಣ ಪ್ರಾರಂಭ ಆದಾಗ ಮುಸ್ಲಿಮರು ಕೂಡ ಸಂತೋಷ ಪಡಲಿದ್ದಾರೆ. ಆಗಲೂ ನಾನು ಖುಷಿ ಪಡುತ್ತೇನೆ.
ಸದಾ ಸಂತಸದಿಂದಿರಲು, ದೇವರನ್ನು ಕಾಣಲು ಮಂದಿರ,ಮಸೀದಿಗಳೇ ಬೇಕಾಗಿಲ್ಲ. ದೇವರು ನಮ್ಮಲ್ಲಿಯೇ ಇದ್ದಾನೆ ಎಂಬುದನ್ನು ಜನರು ಅರಿತರೆ ನನಗೆ ಹೆಚ್ಚು ಖುಷಿ ಆಗುತ್ತದೆ ಎಂದು ರಮ್ಯ ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ ಸಾಮಾಜಿಕ ತಾಣದಿಂದ ದೂರ ಉಳಿದಿದ್ದ ನಟಿ ರಮ್ಯಾ ಇದೀಗ ಅಯೋಧ್ಯೆ ರಾಮಮಂದಿರ ಭೂಮಿ ಪೂಜೆ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ಮತ್ತೆ ಸುದ್ದಿಯಾಗುತ್ತಿದ್ದಾರೆ.