ಮುಂಬೈ, ಆ. 05 (DaijiworldNews/MB) : ತನ್ನ ಯಶಸ್ವಿ ವೈವಾಹಿಕ ಜೀವನದ ಗುಟ್ಟು ಬಿಚ್ಚಿಟ್ಟಿರುವ ನಟಿ ಅನುಷ್ಕಾ ಶರ್ಮಾ ಯಾವುದೇ ಉತ್ತಮ ಅಥವಾ ಕೆಟ್ಟ ಸಂದರ್ಭದಲ್ಲಿ ಜೊತೆಯಲ್ಲೇ ಇರುವ ದೃಢ ಸಂಕಲ್ಪ ಹೊಂದಿದ್ದರೆ ವೈವಾಹಿಕ ಜೀವನ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ.
ಜೂನ್ 4 ರಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಪ್ರಶೋತ್ನರ ಸಂವಾದ ಏರ್ಪಡಿಸಿದ್ದ ನಟಿ, ತನ್ನ ಹಾಗೂ ವಿರಾಟ್ ಕೊಹ್ಲಿ ನಡುವೆ ನಡೆಯುವ ಕೆಲವು ಹಾಸ್ಯ ಘಟನೆಗಳು ಹಾಗೂ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ಪ್ರೀತಿ ಎಂದರೆ ಎಲ್ಲವನ್ನು ಒಪ್ಪಿಕೊಳ್ಳವುದಾಗಿದ್ದು ಇದರಲ್ಲಿ ನಂಬಿಕೆ ಬಹಳ ಮುಖ್ಯ. ಒಳ್ಳೆಯ ಸಂಬಂಧವೆಂದರೆ ಅದು ಬದ್ಧತೆ, ಯಾವುದೇ ಸಂದರ್ಭವಾದರೂ ಜೊತೆಯಾಗಿರುವ ದೃಢತೆ ಇರಬೇಕು. ಜೀವನದಲ್ಲಿ ಏರಿಳಿತ ಸಾಮಾನ್ಯ ಎಂದು ಹೇಳಿದ್ದಾರೆ.
ಕೊಹ್ಲಿ ಅವರಿಗೆ ನೀವು ಯಾವಾಗ ಹೆಚ್ಚು ಕಿರಿಕಿರಿ ಮಾಡುತ್ತೀರಿ ಎಂದು ಒಬ್ಬರು ಪ್ರಶ್ನಿಸಿದಾಗ, ನಾನು ಬೋರ್ಡ್ ಆಟಗಳಲ್ಲಿ ಅವರನ್ನು ಸೋಲಿಸಿದಾಗ ಅವರಿಗೆ ಕಿರಿಕಿರಿಯಾಗುತ್ತದೆ. ಯಾವುದರಲ್ಲೂ ಸೋಲುವುದು ಅವರಿಗೆ ಇಷ್ಟವಿಲ್ಲ ಎಂದು ಹೇಳಿದ್ದು ಹಾಗೆಯೇ ಕೇರಂ, ಚೆಸ್ನಂತಹ ಬೋರ್ಡ್ ಗೇಮ್ಗಳಲ್ಲಿ ಗಂಡ ವಿರಾಟ್ ಕೊಹ್ಲಿ ಅವರನ್ನು ಸೋಲಿಸುವ ಮೂಲಕ ಸಂತೋಷ ಪಡುತ್ತೇನೆ ಎಂದಿದ್ದಾರೆ.
ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.