ಮುಂಬೈ, ಅ 02(DaijiworldNews/HR): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಪೂರ್ವ ನಿಯೋಜಿತ ಕೊಲೆ. ಇದನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಹಾಗೂ ಅನೇಕರು ಒತ್ತಾಯಿಸುತ್ತಿದ್ದು, ಸುಶಾಂತ್ ಸಿಂಗ್ ರಜಪೂತ್ ಕೊಡಗಿನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದರು ಎಂದು ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ನಲ್ಲಿ ತಮ್ಮ ವೃತ್ತಿಜೀವನವನ್ನು ತ್ಯಜಿಸಿ ತಮ್ಮ ಸ್ನೇಹಿತ ಮಹೇಶ್ ಅವರೊಂದಿಗೆ ಸೇರಿ ಕೊಡಗಿನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದರು. ಆದರೆ ಪ್ರೇಯಸಿ ರಿಯಾ ಚಕ್ರವರ್ತಿಗೆ ಸುಶಾಂತ್ ಸಿಂಗ್ಗೆ ಕೃಷಿ ಮಾಡಲು ಅನುಮತಿ ಕೊಟ್ಟಿಲ್ಲ. ಜೊತೆಗೆ ಮುಂಬೈನಲ್ಲೇ ಸುಶಾಂತ್ ಸಿಂಗ್ನನ್ನು ಉಳಿಯುವಂತೆ ಒತ್ತಾಯಿಸಿದ್ದರು. ಅಷ್ಟೇ ಅಲ್ಲದೇ ಸುಶಾಂತ್ ಸಿಂಗ್ ಅವರ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದಾಗಿ ರಿಯಾ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಒಂದು ವೇಳೆ ಸುಶಾಂತ್ ಸಿಂಗ್ ಮಾನಸಿಕ ಸ್ಥಿತಿ ಜಗತ್ತಿಗೆ ಬಹಿರಂಗವಾದರೆ, ಯಾವುದೇ ಕೆಲಸ ಸಿಗುವುದಿಲ್ಲ ಮತ್ತು ನಿರುದ್ಯೋಗಿ ಆಗಬಹುದು ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ ರಿಯಾ ಚಕ್ರವರ್ತಿ ನಗದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳು, ಅವುಗಳ ಪಿನ್ ನಂಬರ್, ಸುಶಾಂತ್ ಸಿಂಗ್ ಅವರ ವೈದ್ಯಕೀಯ ವರದಿಗಳು, ಲ್ಯಾಪ್ಟಾಪ್ ಮತ್ತು ಆಭರಣಗಳು ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಮನೆಯಿಂದ ಹೊರ ಹೋಗಿದ್ದರು. ಮನೆಯಿಂದ ಹೋಗುವ ಮುನ್ನ ರಿಯಾ, ಸುಶಾಂತ್ ಸಿಂಗ್ ಮೊಬೈಲ್ ನಂಬರ್ ಕೂಡ ಬ್ಲಾಕ್ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ.