ಮುಂಬೈ, ಜು. 27 (DaijiworldNews/MB) : ತನ್ನ ಅರೆನಗ್ನ ಫೋಟೋಗಳಿಂದಲ್ಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ನ ಮಾದಕ ನಟಿ ಪೂನಂ ಪಾಂಡೆ ಇನ್ಮುಂದೆ ಒಬ್ಬಟ್ಟಿಯಲ್ಲ, ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ, ಇನ್ಮುಂದೆ ನಾನು ಒಬ್ಬಂಟಿಯಲ್ಲ, ಬೆಸ್ಟ್ ಫೀಲಿಂಗ್ ಎಂದು ಹೇಳಿಕೊಂಡಿದ್ದಾರೆ.
ತನ್ಮ ಗೆಳೆಯ ಸ್ಯಾಮ್ ಅಹಮ್ಮದ್ ಬಾಂಬೆ ಅವರನ್ನು ನಿಶ್ಚಿತಾರ್ಥವಾಗಿರುವ ನಟಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡಿದ್ದು ಈ ಫೋಟೋ ಈಗ ಸಖತ್ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಲಾಕ್ಡೌನ್ ಉಲ್ಲಂಘನೆ ಮಾಡಿ ಮುಂಬೈ ಪೊಲೀಸರ ಅತಿಥಿಯಾಗಿದ್ದ ಈ ಇಬ್ಬರು, ಈ ವಿವಾದವಾದ ಬೆನ್ನಲ್ಲೇ ನಿಶ್ಚಿತಾರ್ಥದ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳು ನಟಿಯ ಹೊಸ ಹೆಜ್ಜೆಗೆ ಶುಭ ಕೋರಿದ್ದಾರೆ.
2019 ವಿಶ್ವಕಪ್ ವೇಳೆ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಗೆದ್ದರೆ ಬಟ್ಟೆ ಬಿಚ್ಚುವುದಾಗಿ ತಿಳಿಸುವ ಮೂಲಕ ಭಾರೀ ಸುದ್ದಿಯಾಗಿದ್ದ ಪೂನಾಂ ಗೆದ್ದ ಬಳಿಕ ಟು ಪೀಸ್ ಹಾಕಿ ವೀಡೀಯೋವನ್ನು ಹಂಚಿಕೊಂಡಿದ್ದರು.
ಇನ್ನು ಇವರು ಸ್ಯಾಂಡಲ್ವುಡ್ನಲ್ಲಿ ಬರಲಿರುವ ಮೀಟೂ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.