ನಾಗಮಂಡಲ, ಜು. 26 (DaijiworldNews/SM): ನಟಿ ವಿಜಯಲಕ್ಷ್ಮಿ ವಿಡಿಯೋ ಮಾಡಿ ಆತ್ಮಹತ್ಯೆ ಗೆ ಯತ್ನಿಸಿರುವ ಘಟನೆ ನಡೆದಿದೆ. ಪ್ರಸ್ತುತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ನನ್ನ ಕಡೆಯ ವಿಡಿಯೋವಾಗಿದೆ. ಆ ವೀಡಿಯೋದಲ್ಲಿ ತನ್ನ ಸಾವಿಗೆ ಕಾರಣ ಯಾರು ಎಂದು ವಿವರಿಸಿದ್ದಾರೆ. ಅಲ್ಲದೆ, ವಿಡಿಯೋದಲ್ಲಿ ಮಾತನಾಡಿರುವ ವಿಜಯಲಕ್ಷ್ಮಿ, ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ತನಗೆ ಕಾಟ ನೀಡಲಾಗಿದೆ. ಆದರೆ, ನಾನು ಅದನ್ನು ತಡೆದುಕೊಂಡಿದ್ದೇನೆ. ಆದರೆ, ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ.
ನಾನು ಬದುಕಿರುವುದು ನನ್ನ ಅಮ್ಮ ಮತ್ತು ನನ್ನ ಅಕ್ಕನಿಗಾಗಿ. ಆದರೆ ಈಗ ನನಗೆ ಸಾಕಾಗಿದೆ ಎಂದು ಹೇಳಿದ್ದಾರೆ.